ಮಂಗಳವಾರ, ಸೆಪ್ಟೆಂಬರ್ 21, 2021
27 °C
ಮಹಾನಗರ ಪಾಲಿಕೆಯ ಜನನಿಬಿಡ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಹೊಸ ಆದೇಶ ಹೊರಡಿಸಿದ ಪಾಲಿಕೆ ಆಯುಕ್ತ

ಪ್ರಮುಖ ವೃತ್ತ, ಚೌಕ, ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಎಲ್ಲ ವೃತ್ತ ಹಾಗೂ ಚೌಕಗಳಲ್ಲಿ ಜನಸಂಚಾರ ಸುಗಮಗೊಳಿಸುವ ಸಂಬಂಧ ವಾಹನಗಳ ಪಾರ್ಕಿಂಗ್‌ ನಿಷೇಧಿಸಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಆದೇಶ ಹೊರಡಿಸಿದ್ದಾರೆ.

ದೊಡ್ಡ ವೃತ್ತಗಳ ಸುತ್ತ 50 ಮೀಟರ್‌ ವ್ಯಾಪ್ತಿಯಲ್ಲಿ ಹಾಗೂ ಚಿಕ್ಕ ವೃತ್ತಗಳಲ್ಲಿ (ಫ್ರೀ ಲೆಫ್ಟ್‌) 25 ಮೀಟರ್‌ ವ್ಯಾಪ್ತಿಯ ಒಳಗೆ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ. ನಿಷೇಧಿತ ಸ್ಥಳಗಳನ್ನು ಹೊರತುಪಡಿಸಿ ಗುರುತಿಸಿದ ಜಾಗದಲ್ಲೇ ಪಾರ್ಕಿಂಗ್‌ ಮಾಡುವುದು ಕಡ್ಡಾಯ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ವಲಯ 1ರಲ್ಲಿ 22 ವೃತ್ತ ಹಾಗೂ ರಸ್ತೆ, ವಲಯ 2ರಲ್ಲಿ 55 ವೃತ್ತ, ರಸ್ತೆ ಹಾಗೂ ಚೌಕಗಳು, ವಲಯ 3ರಲ್ಲಿ 17 ಸರ್ಕಲ್‌ಗಳನ್ನು ಗುರುತಿಸಲಾಗಿದ್ದು, ಅಲ್ಲಿ ವಾಹನ ನಿಲುಗಡೆ ನಿಷೇಧವಿರಲಿದೆ.

ಅತ್ಯಂತ ಜನನಿಬಿಡ ರಸ್ತೆ, ವೃತ್ತ, ಮಾರ್ಕೆಟ್‌, ಸರ್ಕಾರಿ ಕಚೇರಿ, ಕೋರ್ಟ್‌ ಮುಂತಾದ ಸ್ಥಳಗಳಲ್ಲಿ ಜನರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು ಮುಂದುವರಿದಿದೆ. ಅದರಲ್ಲೂ ಬೈಕ್‌, ಆಟೊ, ಕಾರ್‌ ನಿಲ್ಲಿಸಿ ಜನರ ಓಡಾಟಕ್ಕೆ ತೊಂದರೆ ಮಾಡಲಾಗುತ್ತಿದೆ. ಈ ಬಗ್ಗೆ ನಗರವಾಸಿಗಳಿಂದ ಪದೇಪದೇ ದೂರುಗಳು ಬಂದಿದ್ದು, ಅದನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಇದನ್ನು ಎಲ್ಲ ವಾಹನ ಸವಾರರೂ ಕಡ್ಡಾಯವಾಗಿ ಪಾಲಿಸಬೇಕು ಎಂದೂ ಸ್ನೇಹಲ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.