ನಡೆದಿದ್ದು ಏನು?
ಕಳೆದ ತಿಂಗಳು ನದೀಮ್ ಖರೀದಿಸಿದ್ದ ಇ–ಸ್ಕೂಟರ್‌ನ ಬೆಲ್ಟ್‌ನಿಂದ ಶಬ್ದ ಬರುತ್ತಿತ್ತು. ಎರಡ್ಮೂರು ಬಾರಿ ದುರಸ್ತಿ ಮಾಡಿ, ಹೊಸ ಮೋಟರ್ ಅಳವಡಿಸಲಾಗಿತ್ತು. ಬೆಲ್ಟ್ ಶಬ್ದ ನಿಲ್ಲುತ್ತಿಲ್ಲ ಎಂದ ನದೀಮ್, ಸೆಪ್ಟೆಂಬರ್ 10ರಂದು ಶೋರೂಂಗೆ ಬಂದು ಹೊಸ ವಾಹನ ಕೊಡುವಂತೆ ತಕರಾರು ತೆಗೆದರು. ಇಬ್ಬರು ಸಿಬ್ಬಂದಿ ಚಹಾ ಕುಡಿಯಲು ಹೊರಗೆ ಹೋಗಿದ್ದಾಗ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿ, ಬಳಿಕ ಇ–ಸ್ಕೂಟರ್‌ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.