ಪಾರ್ಥೇನಿಯಂನಿಂದ ಚರ್ಮರೋಗ, ಆಸ್ತಮಾ: ಡಾ.ರಾಜು ತೆಗ್ಗೆಳ್ಳಿ

7

ಪಾರ್ಥೇನಿಯಂನಿಂದ ಚರ್ಮರೋಗ, ಆಸ್ತಮಾ: ಡಾ.ರಾಜು ತೆಗ್ಗೆಳ್ಳಿ

Published:
Updated:
Deccan Herald

ಕಲಬುರ್ಗಿ: ಜಮೀನಿನಲ್ಲಿ ಬೆಳೆಯುವ ಪಾರ್ಥೇನಿಯಂ ಮನುಷ್ಯರು ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಚರ್ಮರೋಗ, ಆಸ್ತಮಾಕ್ಕೂ ಕಾರಣವಾಗುತ್ತಿದೆ ಎಂದು ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗೆಳ್ಳಿ ಹೇಳಿದರು.

ಶುಕ್ರವಾರ ಪಾರ್ಥೇನಿಯಂ ನಿರ್ವಹಣಾ ದಿನಾಚರಣೆಯಲ್ಲಿ ಮಾತನಾಡಿ, ‘ಇದು 1950ರಲ್ಲಿ ನಮ್ಮ ದೇಶ ಪ್ರವೇಶಿಸಿತು. ಇಲ್ಲಿಯವರೆಗೆ ಸುಮಾರು 35 ಕೋಟಿ ಹೆಕ್ಟೇರ್‌ನಲ್ಲಿ ಹರಡಿದೆ’ ಎಂದರು.

‘ಇದು ವಾರ್ಷಿಕ ಕಳೆ ಬೆಳೆಯಾಗಿದ್ದು ಬೇಗ ಮಾಗುವಿಕೆಯ ಸಾಮರ್ಥ್ಯ ಹೊಂದಿದೆ. ಒಂದು ಸಸ್ಯವು ಅದರ ಜೀವಿತಾವಧಿಯಲ್ಲಿ 5 ಸಾವಿರದಿಂದ 25 ಸಾವಿರ ಬೀಜಗಳನ್ನು ಉತ್ಪಾದಿಸಬಲ್ಲದು. ಈ ಬೀಜಗಳು ಕಡಿಮೆ ತೂಕದ್ದಾಗಿದ್ದು, ಗಾಳಿಗೆ ದೂರದ ಸ್ಥಳಗಳಿಗೂ ಪಸರಿಸುತ್ತವೆ. ಈ ಕಳೆ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಮಂಜುನಾಥ ಪಾಟೀಲ, ಡಾ.ಜಹೀರ್‌ ಅಹಮದ್, ಡಾ. ಶಂಕ್ರಯ್ಯ ಮಠಪತಿ ಹಾಗೂ ರೈತರು ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !