ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: 293 ಮತದಾರರಿರುವ ಗ್ರಾಮದಲ್ಲಿ 1,073 ಜನರಿಗೆ ಪಿಂಚಣಿ!

Published 22 ಆಗಸ್ಟ್ 2023, 15:58 IST
Last Updated 22 ಆಗಸ್ಟ್ 2023, 15:58 IST
ಅಕ್ಷರ ಗಾತ್ರ

ಕಲಬುರಗಿ: ‘ಕಮಲಾಪುರ ತಾಲ್ಲೂಕಿನ ವಡಗೇರಾ ಗ್ರಾಮದಲ್ಲಿ 293 ಮತದಾರರಿದ್ದು, ಇದಕ್ಕಿಂತ ಮೂರೂವರೆ ಪಟ್ಟು ಅಂದರೆ 1,073 ಜನರಿಗೆ ಪಿಂಚಣಿ ನೀಡಲಾಗುತ್ತಿದೆ’ ಎಂದು ಅಹಿಂದ ಚಿಂತಕರ ವೇದಿಕೆ ಅಧ್ಯಕ್ಷ ಸೈಬಣ್ಣಾ ಜಮಾದಾರ ಆರೋಪಿಸಿದರು.

‘ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸರ್ಕಾರದ ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾಸುರಕ್ಷಾ, ರಾಷ್ಟ್ರೀಯ ಕುಟುಂಬ ನೆರವು ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳನ್ನು ನಕಲಿ ದಾಖಲೆ ಸೃಷ್ಟಿಸಿ ಹಣ ಲೂಟಿ ಮಾಡಲಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಉಪತಹಶೀಲ್ದಾರರು, ಗ್ರೇಡ್‌–2 ತಹಶೀಲ್ದಾರರು ಸೇರಿ ಸರ್ಕಾರಕ್ಕೆ ಮತ್ತು ಜನರಿಗೆ ವಂಚನೆ ಮಾಡುತ್ತಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಅಫಜಲಪುರ ತಾಲ್ಲೂಕಿನ ಶೇಷಗಿರಿವಾಡಿ ಗ್ರಾಮದಲ್ಲಿ 1,311 ಮತದಾರರಿದ್ದು, 1,687 ಜನರಿಗೆ ಪಿಂಚಣಿ ಹೋಗುತ್ತಿದೆ. ಒಂದು ತಿಂಗಳಿಗೆ ₹ 14.96 ಲಕ್ಷ ಪಾವತಿ ಆಗುತ್ತದೆ. ಇನ್ನು ರಾಷ್ಟ್ರೀಯ ಕುಟುಂಬ ಯೋಜನೆಯಡಿ 38 ಫಲಾನುಭವಿಗಳಿಗೆ ₹ 7.60 ಲಕ್ಷ ಸಂದಾಯವಾಗುತ್ತದೆ. 1024 ಮತದಾರರಿರುವ ಯಡ್ರಾಮಿ ತಾಲ್ಲೂಕಿನ ಮುರಗಾನೂರು ಗ್ರಾಮದಲ್ಲಿ 1,047 ಜನ ಪ್ರತಿ ತಿಂಗಳು ₹ 14 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.

‘ಚಿಂಚೋಳಿ ತಾಲ್ಲೂಕಿನ ವಂಟಿಗುಡಸಿ ತಾಂಡಾದಲ್ಲಿ 359 ಮತದಾರರಿದ್ದು, 800ಕ್ಕೂ ಹೆಚ್ಚು ಜನ ಪಿಂಚಣಿ ಪಡೆಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ವೇದಿಕೆ ಕಾರ್ಯದರ್ಶಿ ರಮೇಶ ಹಡಪದ, ಖಜಾಂಚಿ ಸಂಜು ಹೊಡಲ್ಕರ್‌, ಯಶವಂತರಾವ್‌ ಸೂರ್ಯವಂಶಿ, ವಿಜಯಕುಮಾರ ಮಠಪತಿ, ವಿನೋದ ಹಡಪದ ಇದ್ದರು.

ಬಡತನ ರೇಖೆಗಿಂತ ಕೆಳಗಿರುವ ಸಂಕಷ್ಟದಲ್ಲಿರುವ ಜನರಿಗೆ ಆರ್ಥಿಕ ನೆರವು ನೀಡುವ ಪಿಂಚಣಿ ಯೋಜನೆಗಳು ದುರ್ಬಳಕೆ ಆಗುತ್ತಿವೆ. ಈ ಬಗ್ಗೆ ಕಂದಾಯ ಸಚಿವರಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಸೈಬಣ್ಣಾ ಜಮಾದಾರ ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT