ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತವೀರ ಮಳೇಂದ್ರ ಶಿವಾಚಾರ್ಯರ ಪುಣ್ಯಸ್ಮರಣೆ

Published 3 ಜುಲೈ 2024, 16:02 IST
Last Updated 3 ಜುಲೈ 2024, 16:02 IST
ಅಕ್ಷರ ಗಾತ್ರ

ಅಫಜಲಪುರ: ಇಲ್ಲಿನ ಹಿರೇಮಠದ ಶಾಂತವೀರ ಮಳೇಂದ್ರ ಶಿವಾಚಾರ್ಯರ 16ನೇ ಪುಣ್ಯಸ್ಮರಣೋತ್ಸವ ಬುಧವಾರ ಸಡಗರ-ಸಂಭ್ರಮದಿಂದ ಜರುಗಿತು.

ಶಾಂತವೀರ ಮಳೇಂದ್ರ ಶಿವಾಚಾರ್ಯರು ಲಿಂಗೈಕ್ಯರಾಗಿ 16 ವರ್ಷಗಳು ಕಳೆದಿವೆ. ಹೀಗಾಗಿ ಬುಧವಾರ ಬೆಳಿಗ್ಗೆ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಅಲಂಕಾರ, ರಕ್ತದಾನ ಶಿಬಿರ, ಪ್ರಸಾದ ವ್ಯವಸ್ಥೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಜರುಗಿದವು. ಬೆಳಿಗ್ಗೆ 6 ಗಂಟೆಯಿಂದ ಮಠಕ್ಕೆ ಭಕ್ತಾದಿಗಳು ತಂಡೋಪ ತಂಡವಾಗಿ ಆರಂಭವಾಗಿದ್ದು ಸಾಯಂಕಾಲದವರಿಗೆ ನಡೆದ ಬಂತು.

ಭಕ್ತಾದಿಗಳಾದ ಚಂದ್ರಶೇಖರ್ ಕರಜಿಗಿ, ಸಿದ್ದಯ್ಯ ಹಿರೇಮಠ ಕರಜಿಗಿ, ಮಕಸೂದ್ ಜಾಗೀರ್‌ದಾರ್, ಚಂದು ಬನ್ನಟ್ಟಿ, ಬಸವರಾಜ ವಾಳಿ, ಚಂದ್ರಶೇಖರ್ ನಿಂಬಾಳ, ಶೈಲೇಶ್ ಗುಣಾರಿ, ಚಿದಾನಂದ ಮಠ, ಬಸು ಕಲಶೆಟ್ಟಿ ಮತ್ತಿತರರು ಇದ್ದರು.

ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಬುಧವಾರ ಪ್ರಮಾಣ ಪತ್ರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT