ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವ್ಯತ್ಯಯ ನಾಳೆ

Last Updated 20 ಜೂನ್ 2020, 15:31 IST
ಅಕ್ಷರ ಗಾತ್ರ

ಕಲಬುರ್ಗಿ: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ವಿವಿಧ ಫೀಡರ್‌ಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಹಾಗೂ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಜೂನ್ 22ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ‍ಪ್ರಕಟಣೆ ತಿಳಿಸಿದೆ.

ಜೇವರ್ಗಿ ಕಾಲೊನಿ ಫೀಡರ್: ಜೀವನ ಪ್ರಕಾಶ ಶಾಲೆ, ಕಾರ್ಪೋರೇಶನ್ ಲೇಔಟ್, ನ್ಯೂ ಮಾಕಾ ಲೇಔಟ್, ಪವಾರ ಲೇಔಟ್, ಶ್ರೀನಗರ, ಬಿದ್ದಾಪುರ ಕಾಲೊನಿ, ಉದಯ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಗೋದುತಾಯಿ ಫೀಡರ್: ಜಿ.ಡಿ.ಎ. ಧರಿಯಾಪುರ, ರೆಹಮತ್ ನಗರ, ಲೋಕೋಪಯೋಗಿ ಇಲಾಖೆ ಕ್ವಾರ್ಟರ್ಸ್, ಎನ್.ಜಿ.ಒ. ಕಾಲೊನಿ ( ರೈಲ್ವೆ ಟ್ಯ್ರಾಕ್), ದತ್ತ ನಗರ ಚಿತ್ತಾರಿ ಸಾಮಿಲ್ ಏರಿಯಾ, ಮಾಕಾ ಲೇಔಟ್, ಜಾಧವ ಲೇಔಟ್, ಅಂಬಿಕಾ ನಗರ, ರುದ್ರವಾಡಿ ಆಸ್ಪತ್ರೆ ಏರಿಯಾ, ಬಿ.ಸಿ.ಎಂ. ಕಚೇರಿ, ಡೆಂಕಿನಭಾವಿ, ಹುದಾ ಮಸೀದಿ ಅಂಡರ್ ಬ್ರಿಜ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ರಾಮಮಂದಿರ ಫೀಡರ್: ಸದಾಶಿವ ನಗರ, ನವಜೀವನ ಸೊಸೈಟಿ ,ಕಲ್ಮಣಕರ್ ಲೇಔಟ್, ರಾಮಮಂದಿರ, ಕರುಣೇಶ್ವರ ನಗರ ದೇವಾ ನಗರ, ಪಿ ಅಂಡ್ ಟಿ ಕಾಲೊನಿ, ಎಸ್‍ಬಿಐ ಕಾಲೊನಿ, ಗಣೇಶ ನರ್ಸಿಂಗ್ ಹೋಂ ಏರಿಯಾ, ಯರಗೋಳ ಕಲ್ಯಾಣ ಮಂಟಪ, ಕರುಣೇಶ್ವರ ನಗರ ರಾಜ್‍ಮಹಲ್ ಲೇಔಟ್, ಶ್ರೀಹರಿ ನಗರ, ಮಾನ್‍ಕರ ಲೇಔಟ್, ಸಾಯಿ ಮಂದಿರ ಏರಿಯಾ ಆನಂದೇಶ್ವರ ಕಾಲೊನಿ ಡಾಮಿನಂಟ್ ಸ್ಕೂಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಹೌಸಿಂಗ್ ಬೋರ್ಡ್ ಫೀಡರ್: ಜಿ.ಡಿ.ಎ, ಪಿ ಅಂಡ್ ಟಿ, ನವಜೀವನ ನಗರ, ಮೋಹನ ನಗರ ಗಾಬ್ರೇ ಲೇಔಟ್, ಹೌಸಿಂಗ್ ಬೋರ್ಡ್ ಕಾಲೊನಿ, ಕಣ್ಮಕರ ಲೇಔಟ್, ಕಾಯಕ ಮತ್ತು ನಳಂದಾ ಶಾಲೆ, ತೋಶಣಿ ಬಾಲಾ ಲೇಔಟ್, ಸಿದ್ಧೇಶ್ವರ ಕಲ್ಯಾಣ ಮಂಟಪ, ಗಣೇಶ ನಗರ ಭಾಗ್ಯವಂತಿ ನಗರ, ಮುಕ್ತಾ ಟಾಕೀಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ

‌ಕಲಬುರ್ಗಿ: ಶಿಶು ಅಭಿವೃದ್ಧಿ ಯೋಜನಾ (ನಗರ) ವ್ಯಾಪ್ತಿಯಲ್ಲಿ 10 ಅಂಗನವಾಡಿ ಸಹಾಯಕಿಯರ ಹುದ್ದೆಗಳ ಹಾಗೂ 21 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ (ಸೇವಾ ಹಿರಿತನದ ಆಧಾರದ ಮೇರೆಗೆ) ಅಂಗನವಾಡಿ ಸಹಾಯಕಿಯರನ್ನು ಅಂಗನವಾಡಿ ಕಾರ್ಯಕರ್ತೆ ಎಂದು ಪರಿಗಣಿಸಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣಪ್ಪ ಸಿರಸಗಿ ತಿಳಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಖಾಲಿ ಇರುವ 12 ಅಂಗನವಾಡಿ ಸಹಾಯಕಿಯರ ಹುದ್ದೆಗಳ ಪೈಕಿ 10 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಹಾಗೂ 33 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳ ಪೈಕಿ 21 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಜೂನ್ 18ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಆಯ್ಕೆ ಸಮಿತಿಯಲ್ಲಿ ಅನುಮೋದನೆ ನೀಡಿದ್ದರಿಂದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT