ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ: ವಿದ್ಯಾರ್ಥಿಗಳ ನೋಂದಣಿ ಆರಂಭ

Last Updated 21 ಡಿಸೆಂಬರ್ 2018, 12:03 IST
ಅಕ್ಷರ ಗಾತ್ರ

ರಾಯಚೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಹಯೋಗದಲ್ಲಿ ಶಾಲಾ ಮಕ್ಕಳಿಗಾಗಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.

ರಾಯಚೂರು ವಲಯದ ರಸಪ್ರಶ್ನೆ ಸ್ಪರ್ಧೆಯು ಜನವರಿ 19ರಂದು ಬೆಳಿಗ್ಗೆ 8.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ, ಸ್ಟೇಷನ್‌ ರಸ್ತೆ, ರಾಯಚೂರು–584101ರಲ್ಲಿ ನಡೆಯಲಿದೆ.

5ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಪ್ರತಿ ಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳ ಮೂರು ತಂಡ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದು, ನೋಂದಣಿಗೆ ಡಿಸೆಂಬರ್‌ 31 ಕೊನೆ ದಿನ. ಸ್ಪರ್ಧಾಳುಗಳು ಶಾಲೆಯ ಮೂಲಕವೇ ನೋಂದಣಿ ಮಾಡಿಸಿಕೊಂಡು ಭಾಗವಹಿಸಬಹುದು. ನೋಂದಣಿ ಶುಲ್ಕ ಇಲ್ಲ.

ಈ ಸ್ಪರ್ಧೆಯಲ್ಲಿ ರಾಯಚೂರು, ಕೊಪ್ಪಳ ಜಿಲ್ಲೆಗಳ ಮಕ್ಕಳು ಪಾಲ್ಗೊಳ್ಳಲು ಅವಕಾಶ ಇದೆ.

ಆಸಕ್ತರು ಮಾಹಿತಿ ಮತ್ತು ನೋಂದಣಿಗಾಗಿ
ರಾಯಚೂರು:
ಅಯ್ಯಣ್ಣ ಮೊ.97416 55512,
ಕೊಪ್ಪಳ: ಕೊಪ್ರೇಶ್‌ ಜೋಶಿ ಮೊ.98869 88107,
ಅಥವಾ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಅಶೋಕ ಪಾಟೀಲ ಮೊ.93433 82520, ಕಲಬುರ್ಗಿ ಕಚೇರಿ ದೂರವಾಣಿ 08472–255539 ಸಂಪರ್ಕಿಸಬಹುದು.

ಮುಖ್ಯಗುರುಗಳು/ಮುಖ್ಯಾಧ್ಯಾಪಕರು/ಪ್ರಾಚಾರ್ಯರು ಭರ್ತಿ ಮಾಡಿದ ಅರ್ಜಿಗಳನ್ನು ಇ–ಮೇಲ್‌ circglb@deccanherald.co.in ಮೂಲಕವೂ ನೋಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT