ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.16: ವಿಶ್ವೇಶತೀರ್ಥ ಶ್ರೀಪಾದ ಭಾವಚಿತ್ರ, ‘ಪದ್ಮವಿಭೂಷಣ’ ಪ್ರಶಸ್ತಿ ಮೆರವಣಿಗೆ

ಕಲಬುರಗಿಗೆ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ವಿದ್ಯಾಧೀಶತೀರ್ಥ ಶ್ರೀಪಾದ
Last Updated 15 ಫೆಬ್ರುವರಿ 2022, 11:06 IST
ಅಕ್ಷರ ಗಾತ್ರ

ಕಲಬುರಗಿ: ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂಪಾಲಿಮರ ಮಠದ ವಿದ್ಯಾಧೀಶತೀರ್ಥ ಶ್ರೀಪಾದರು ಫೆ. 16 ರಂದು ಕಲಬುರಗಿ ನಗರಕ್ಕೆ ಪ್ರವೇಶ ಮಾಡಲಿದ್ದಾರೆ. ಅದೇ ದಿನ ನಗರದಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರದೊಂದಿಗೆ ಶೋಭಾಯಾತ್ರೆ ಕೂಡ ನಡೆಯಲಿದೆ.

ಪೇಜಾವರ ಮಠದ ಹಿಂದಿನ ಶ್ರೀಗಳಾದ ವಿಶ್ವೇಶತೀರ್ಥ ಶ್ರೀಪಾದರಿಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ ‘ಪದ್ಮವಿಭೂಷಣ’ ಪ್ರಶಸ್ತಿ ಪ್ರದಾನ ಮಾಡಿದೆ. ಇದರ ಸಂಭ್ರಮದ ಅಂಗವಾಗಿ ನಗರದಲ್ಲಿ ಶ್ರೀಪಾದರ ಭಾವಚಿತ್ರ ಹಾಗೂ ‘ಪದ್ಮವಿಭೂಷಣ’ ಪ್ರಶಸ್ತಿಯ ಮೆರವಣಿಗೆ ಕೂಡ ಮಾಡಲಾಗುವುದು.

ಫೆ. 16ರಂದು ಸಂಜೆ 4.30ಕ್ಕೆ ಇಲ್ಲಿನ ವಿಠಲನಗರದ ಹನುಮಾನ್‌ ಮಂದಿರದಿಂದ ವಿದ್ಯಾನಗರದ ಕೃಷ್ಣ ಮಂದಿರದವರೆಗೂ ಶೋಭಾಯಾತ್ರೆ ನಡೆಯಲಿದೆ. ಇದರಲ್ಲಿ ವಿಶ್ವಪ್ರಸನ್ನ ಶ್ರೀಪಾದರು ಹಾಗೂ ವಿದ್ಯಾಧೀಶತೀರ್ಥ ಶ್ರೀಪಾದರು ಪಾಲ್ಗೊಳ್ಳುವುದು ವಿಶೇಷ. ಅದೇ ದಿನ ಸಂಜೆ 6.30ಕ್ಕೆ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಸಭಾ ಕಾರ್ಯಕ್ರಮ ಹಾಗೂ ಪದ್ಮವಿಭೂಷಣ ಪ್ರಶಸ್ತಿಯ ಸ್ವಾಗತ ಸಮಾರಂಭ ಕೂಡ ಆಯೋಜಿಸಲಾಗಿದೆ.

ಅಖಿಲ ಭಾರತ ಮಾಧ್ವ ಮಹಾಮಂಡಲ, ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀಕೃಷ್ಣ ಮಂದಿರ ಹಾಗೂ ಮನುಮ–ಭೀಮ ಮಧ್ವರ ದೇವಸ್ಥಾನಗಳ ಆಶ್ರಯದಲ್ಲಿ ಈ ಎಲ್ಲ ಕಾರ್ಯಕ್ರಮಗಳ ಸಿದ್ಧತೆ ಭರದಿಂದ ನಡೆದಿದೆ. ಸಭಾ ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಮಾಹಿತಿಗಾಗಿ 944854388, 9449731728 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT