ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ಸರ್ಕಾರದ ವಿರುದ್ಧ ಪ್ರತಿಭಟನೆ

Last Updated 8 ಜನವರಿ 2022, 5:07 IST
ಅಕ್ಷರ ಗಾತ್ರ

ಶಹಾಬಾದ್: ಪ್ರಧಾನಿ ಮೋದಿಗೆ ಸೂಕ್ತ ಭದ್ರತೆ ನೀಡದ ಪಂಜಾಬ್ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ, ನೆಹರು ವೃತ್ತದಲ್ಲಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಯುವಮೋರ್ಚಾ ಅಧ್ಯಕ್ಷ ದಿನೇಶ ಗೌಳಿ ಮಾತನಾಡಿ, ‘ಪಂಜಾಬಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನದ ವೇಳೆ ಭದ್ರತಾ ವೈಫಲ್ಯ ಆಗಿರೋದು ಅಕ್ಷಮ್ಯ ಅಪರಾಧ. ಕೂಡಲೇ ಸಿಎಂ ಸ್ಥಾನಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಚಂದ್ರಕಾಂತ ಗೊಬ್ಬೂರಕರ್ ಮಾತನಾಡಿದರು.

ಮಲ್ಲಿಕಾರ್ಜುನ ಗೊಳೇದ, ರಾಕೇಶ್ ಮಿಶ್ರಾ, ಮಹೇಶ್ ಯಲೇರಿ, ಜ್ಯೋತಿ ಶರ್ಮ, ಮಹದೇವ್ ಗೋಬ್ಬೂರಕರ, ಸಿದ್ರಾಮ ಕುಸಾಳೆ, ಜಯಶ್ರೀ, ಚಂದ್ರಕಾಂತ, ಬಸವರಾಜ ಬಿರಾದಾರ, ಸಂಜಯ, ಆಶಿಷ ಮಂತ್ರಿ, ಬಾಬು ಕೋಬಾಳ, ಪ್ರಬು ಪಾಟೀಲ, ಅಮೀತ ಠಾಕೂರ್, ರೇವಣಸಿದ್ದ, ವೀರೇಶ ಬಂದಳ್ಳಿ, ಕಿರಣ ದಂಡಗುಲಕರ, ಶರಣು ಕೌಲಗಿ, ವಿನಾಯಕ ಗೌಳಿ, ಸತೀಷ ರಾಪನೂರ, ಶ್ರೀನಿವಾಸ ನೇದಲಗಿ, ಅಮುಲ ಪೊದ್ದಾರ, ಸಂಗಮೇಶ ಪಟ್ಟೇದಾರ, ಅಂಬ್ರೇಷ ಕಲ್ಯಾಣಿ, ಅನಿಲ ಕಲ್ಯಾಣಿ, ವಿನೋದ ಕಟ್ಟಿ, ಸುರೇಂದ್ರ ಗೌಳಿ, ಆನಂದ ಕುಂಬಾರ, ಸುಭಾಷ್ ಅವರಾದಿ, ಅಭಯ ಯಾದವ, ಮಹೇಶ್ ಪ್ಯಾರಸಬಾದಿ, ಮಹೇಶ್, ವಿರೇಶಿ ನಾಲವಾರ, ರಜನಿಕಾಂತ್ ಸುರ್ಯವಂಶಿ, ಸಾಯಬಣ್ಣ, ಪರಿಟ, ಸಿದ್ದು ಮಾಣಿಕ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT