ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಬಾದ್: ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ

Published : 27 ಆಗಸ್ಟ್ 2024, 14:28 IST
Last Updated : 27 ಆಗಸ್ಟ್ 2024, 14:28 IST
ಫಾಲೋ ಮಾಡಿ
Comments

ಶಹಾಬಾದ್: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಭೋವಿ ವಡ್ಡರ ಸಮಾಜದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭೋವಿ ವಡ್ಡರ ಸಮಾಜದ ಮುಖಂಡ ಕನಕಪ್ಪ ದಂಡುಗುಳ್ಕರ ಆಗ್ರಹಿದರು.

ಭೋವಿ ವಡ್ಡರ ನಗರ ಮತ್ತು ತಾಲ್ಲೂಕು ಸಮಿತಿ ವತಿಯಿಂದ ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು
ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಇಂತಹ ಕೃತ್ಯಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಬರೆದ ಮನವಿಯನ್ನು ಗ್ರೇಡ್ 2 ತಹಶೀಲ್ದಾರ ಗುರುರಾಜ ಸಂಗಾವಿ ಅವರಿಗೆ ಸಲ್ಲಿಸಿದರು. 

ಪ್ರತಿಭಟನೆಯಲ್ಲಿ ನಗರ ಅಧ್ಯಕ್ಷ ರಾಜು ಮಿಸ್ತ್ರಿ, ತಾಲ್ಲೂಕು ಅಧ್ಯಕ್ಷ ಕಳ್ಳೋಳಿ ಕುಸಾಳೆ, ಬಾಬು ಬಿ. ಪವಾರ, ಶ್ರೀನಿವಾಸ ನೇದಲಗಿ, ಶಿವಕಾಂತ ಮಾನೆ, ಸಂಜಯ ಎಸ್.ವಿಠಕಲ, ವೆಂಕಟೇಶ ಕುಸಾಳೆ, ಜೈಕುಮಾರ ಚೌಧರಿ, ಲಕ್ಷ್ಮಣ ಪವಾರ, ಹನುಮಂತ ಸೇಡಂ, ಎಲ್ಲಪ್ಪ ಬಾಂಬೆ, ದುರ್ಗಪ್ಪ ದೇವಕರ, ರಂಗು ಮಾನೆ, ಶಂಕರ ದಂಡಗುಲ್ಕರ, ತಿಮ್ಮಯ್ಯ ಬಿ. ಮಾನೆ, ಅಂಬಾದಾಸ ಟಿ. ಗುರೂಜಿ, ಸಿದ್ದು ಚೌಧರಿ ಮತ್ತು ನಾಗರಾಜ ಟಿ.ಕೆ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT