ಬೇಳೆ ಕಾಳುಗಳ ಮೇಲೆ ಆಮದು ತೆರಿಗೆ ವಿಧಿಸಲು ಆಗ್ರಹ

7

ಬೇಳೆ ಕಾಳುಗಳ ಮೇಲೆ ಆಮದು ತೆರಿಗೆ ವಿಧಿಸಲು ಆಗ್ರಹ

Published:
Updated:
Prajavani

ಕಲಬುರ್ಗಿ: ಬೇಳೆ ಕಾಳುಗಳ ಮೇಲೆ ಶೇ 35ರಷ್ಟು ಆಮದು ತೆರಿಗೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಡಾ. ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ಕ್ವಿಂಟಲ್ ತೊಗರಿಗೆ ₹7,500 ಬೆಲೆ ನಿಗದಿಪಡಿಸಬೇಕು. ಬೆಂಬಲ ಬೆಲೆಯಲ್ಲಿ ಬೇಳೆ ಕಾಳುಗಳನ್ನು ಖರೀದಿಸಲು ಕಾನೂನು ರಚಿಸಬೇಕು. ಕೇಂದ್ರ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಳೆ ವಿಮಾ ಯೋಜನೆಗಳನ್ನು ರೈತರ ಪರವಾಗಿ ರೂಪಿಸಬೇಕು. 60 ವರ್ಷ ಮೇಲಿನ ರೈತರಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಪ್ರತಿ ಎಕರೆಗೆ ₹10 ಸಾವಿರ ಬರ ಪರಿಹಾರ ನೀಡಬೇಕು. ಮೇವು, ನೀರು ಒದಗಿಸಲು ಕ್ರಮಕೈಗೊಳ್ಳಬೇಕು. ಪಂಚಾಯಿತಿಗೊಂದು ಮೇವು ಬ್ಯಾಂಕ್ ಸ್ಥಾಪಿಸಬೇಕು. ತೊಗರಿ ಖರೀದಿ ನೋಂದಣಿ ಅವಧಿಯನ್ನು ಜ. 31ರ ವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಹೋರಾಟಗಾರ ಎಸ್.ಕೆ.ಕಾಂತಾ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಎಐಕೆಎಸ್‌ನ ಭೀಮಾಶಂಕರ ಮಾಡ್ಯಾಳ, ಅಲ್ಲಾಪಟೇಲ್ ಮಾಲಿಬಿರಾದಾರ, ಶರಣಬಸಪ್ಪ ಮಮಶೆಟ್ಟಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !