ಜೇವರ್ಗಿ: ಪಟ್ಟಣದ ಮಹಾತ್ಮ ಗಾಂಧಿ ರೈತ ಕಲ್ಯಾಣ ಸಂಸ್ಥೆಯ ದಾನಮ್ಮ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ 91 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7-ಡಿಸ್ಟಿಂಕ್ಷನ್, 27-ಪ್ರಥಮ ಶ್ರೇಣಿ, 17-ದ್ವಿತೀಯ ಹಾಗೂ 10-ತೃತೀಯ ಸ್ಥಾನದಲ್ಲಿ ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ ಕಾದಂಬರಿ ಶರಣಪ್ಪ-553 ಅಂಕ, ಪೂಜಾ-546 ಅಂಕ, ವಾಣಿಜ್ಯ ವಿಭಾಗದಲ್ಲಿ ವರ್ಷಾ ವಿಠೋಬಾ-546 ಅಂಕ, ದಾವೂದ್ ಮಹ್ಮದ್- 545 ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಕಾರ್ಯದರ್ಶಿ ಮಹಾಂತಯ್ಯ ಹಿರೇಮಠ, ಪ್ರಾಚಾರ್ಯ ಜಗದೀಶ ಉಕನಾಳ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.