ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಮಳೆ, ತಂಗಾಳಿಯ ಹಿತ

Last Updated 2 ಮಾರ್ಚ್ 2020, 10:13 IST
ಅಕ್ಷರ ಗಾತ್ರ

ಕಲಬುರ್ಗಿ: ಭಾನುವಾರದ ರಜಾ ಮೂಡ್‌ನಲ್ಲಿದ್ದ ನಗರದ ಜನತೆಗೆ ಸಂಜೆ ಸೂಸಿದ ತಂಗಾಳಿ ತಾವು ಮಲೆನಾಡಿನಲ್ಲಿದ್ದೇವೋ ಎಂಬ ಭಾವನೆ ಮೂಡಿಸಿತು. ಅದಾದ ಕೆಲ ಹೊತ್ತಿನಲ್ಲಿಯೇ ಜಿಟಿ ಜಿಟಿ ಹನಿಗಳು ಈ ಮಳೆಗಾಲದ ಮೊದಲ ಮಳೆಯನ್ನು ಹೊತ್ತು ತಂದು ಇಳೆಯನ್ನು ತಂಪಾಗಿಸಿದವು.

ಬೇಸಿಗೆ ಆರಂಭವಾಗಿದ್ದರಿಂದ ಇನ್ನಷ್ಟು ಬಿಸಿಲ ಝಳ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕಲಬುರ್ಗಿ ಮಂದಿಗೆ ಪ್ರಕೃತಿಯ ಈ ವೈಚಿತ್ರ್ಯ ಉಲ್ಲಾಸ, ಖುಷಿಯನ್ನು ನೀಡಿತು.

ಅಫಜಲ‍ಪುರ, ಬಳೂರ್ಗಿ, ಆಳಂದ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು ಅರ್ಧಗಂಟೆಗೂ ಮಳೆ ಸುರಿಯಿತು. ಅರ್ಧ ಗಂಟೆ ಸುರಿದ ಮಳೆಯಿಂದಾಗಿಅಫಜಲಪುರ ತಾಲ್ಲೂಕಿನಲ್ಲಿ ಜೋಳ, ಗೋಧಿ ಹಾಗೂ ಕಡಲೆ ಬೆಳೆಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT