ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾವನೆ ಎಂಬ ಅಲೆಗಳ ಮೇಲೆ ಜೀವಿಸಬೇಕು’

ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಎರಡು ದಿನಗಳ ಭಾವತರಂಗಿಣಿ ಭಕ್ತಿ ಸಂಗಮ
Last Updated 29 ಫೆಬ್ರುವರಿ 2020, 14:34 IST
ಅಕ್ಷರ ಗಾತ್ರ

ಕಲಬುರ್ಗಿ: ಭಾವನೆ ಎಂಬ ಅಲೆಗಳ ಮೇಲೆಯೇ ಜೀವಿಸಬೇಕು. ಜಗತ್ತಿನಲ್ಲಿ ನಾವು ಜೀವಿಸಿರುವುದೇ ಭಾವತರಂಗದ ಮೇಲೆ ಎಂದು ಮಂಗಳೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಜಿತಕಾಮಾನಂದ ಅವರು ಹೇಳಿದರು.

ನಗರದ ರಾಜಾಪುರದಲ್ಲಿರುವ ರಾಮಕೃಷ್ಣ ವಿವೇಕಾನಂದ ಅಶ್ರಮದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಭಕ್ತಿ ಸಂಗಮ ‘ಭಾವತರಂಗಿಣಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯದಿಂದಲೂ ನಮಗೆ ಅತ್ಯಂತ ಆತ್ಮೀಯಳು ಎಂದರೆ ತಾಯಿಯೇ. ಶಂಕರಾಚಾರ್ಯರು ಜಗನ್ಮಾತೆಯ ಬಗ್ಗೆ ಸಂಸ್ಕೃತದಲ್ಲಿ ಈ ಕುರಿತು ಸಂಸ್ಕೃತ ಶ್ಲೋಕಗಳನ್ನು ಬರೆದಿದ್ದಾರೆ. ನಾವು ಭಗವಂತನ ಅನುಗ್ರಹವನ್ನು ಪಡೆಯಲು ಸಾಧನೆ ಮಾಡಬೇಕು. ಇಡೀ ಜೀವನದಲ್ಲಿ ಒಂದು ಸಾಧನೆ ಮಾಡಬೇಕು ಎಂದರೆ ಸಾಕಷ್ಟು ಶ್ರಮ ಹಾಕಬೇಕು. ಆದರೆ, ರಾಮಕೃಷ್ಣ ಪರಮಹಂಸರು ಹಲವಾರು ಸಾಧನೆಗಳನ್ನು ಕೆಲವೇ ದಿನಗಳಲ್ಲಿ ಔನ್ನತ್ಯಕ್ಕೆ ಏರುತ್ತಿದ್ದರು ಎಂದು ವಿಶ್ಲೇಷಿಸಿದರು.

ಸುಖವಾಗಿ ಜೀವಿಸಬೇಕು ಎಂಬುದು ಎಲ್ಲರ ಬಯಕೆಯೂ ಆಗಿರುತ್ತದೆ. ಹಾಗೆಯೇ ಶಿಕ್ಷಣ ಮುಗಿಸಿದ ಬಳಿಕ ಯಾವುದಾದರೂ ಉದ್ಯೋಗ ಹುಡುಕುತ್ತೇವೆ. ಆದರೆ, ಹಲವು ಜನರಿಗೆ ನಾವೇ ಉದ್ಯೋಗ ಕೊಡುವಂತಹ ಉದ್ಯಮವನ್ನು ಆರಂಭಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.

ಸ್ವಾಮಿ ತತ್ವರೂಪಾನಂದ ಅವರು ಮಾತನಾಡಿ, ‘ರಾಮಕೃಷ್ಣರು, ಶಾರದಾದೇವಿ, ವಿವೇಕಾನಂದರಿಂದ ನಾವು ಪ್ರೇಮ, ವಿಶ್ವಾಸ, ದಯೆಯಂತಹ ಹಲವಾರು ಸಂಗತಿಗಳನ್ನು ಪಡೆಯಬೇಕಿದೆ. ಸದಾ ದೇವರ ನಾಮಸ್ಮರಣೆ, ಓಂಕಾರ ಪಠಣದಿಂದ ಹಲವು ಬಗೆಯ ಅನುಕೂಲಗಳಿವೆ’ ಎಂದರು.

ಕಲಬುರ್ಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಹೇಶ್ವರಾನಂದ ಸ್ವಾಮೀಜಿ, ಲಕ್ಷಾಂತರ ಶಾಲಾ ಮಕ್ಕಳಿಗೆ ವಿವೇಕಾನಂದರ ವಿಚಾರಗಳನ್ನು ತಲುಪಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಚಿಕ್ಕ ವಯಸ್ಸಿನಿಂದಲೇ ಈ ಚಿಂತನೆ ಇತ್ತು. ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ಎರಡು ದಿನಗಳವರೆಗೆ ವಿವಿಧ ಗೋಷ್ಠಿಗಳು ನಡೆಯಲಿವೆ. ತಾಡತೆಗನೂರು ಗ್ರಾಮದಲ್ಲಿ ಆಶ್ರಮದಿಂದಲೇ ಶಾಲೆಯೊಂದನ್ನು ನಡೆಸಲಾಗುತ್ತಿದ್ದು, ಅಲ್ಲಿಯೂ ಆಧ್ಯಾತ್ಮ, ಜೀವನ ಕೌಶಲಗಳನ್ನು ತಿಳಿಸುವ ಕಾರ್ಯ ನಡೆಯುತ್ತಿದೆ’ ಎಂದು ವಿವರಿಸಿದರು.

ಬೀದರ್‌ನ ಶಾರದೇಶಾನಂದ ಸ್ವಾಮೀಜಿ, ಸುಮೇಧಾನಂದ ಸ್ವಾಮೀಜಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಸವಿತಾ, ವಿಟಿಯು ಪ್ರಾದೇಶಿಕ ನಿರ್ದೇಶಕ ಬಸವರಾಜ ಗಾದಗೆ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT