ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದ ರಣಹೇಡಿ ಕೃತ್ಯ: ರೇಣುಕಾ ಸಿಂಗೆ

Last Updated 5 ಆಗಸ್ಟ್ 2022, 16:21 IST
ಅಕ್ಷರ ಗಾತ್ರ

ಕಲಬುರಗಿ: ಅಧಿವೇಶನದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಡಿ ಸಮನ್ಸ್ ನೀಡಿರುವುದು ಮೋದಿ ಸರ್ಕಾರದ ರಣಹೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೇಣುಕಾ ಸಿಂಗೆ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಏನೇನೋ ಸುಳ್ಳು ಹೇಳಿ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಿ, ಮುಸ್ಲಿಂ ವಿರೋಧಿ ದ್ವೇಷವನ್ನು ಜನಮಾನಸದಲ್ಲಿ ತುಂಬಿ ಅಧಿಕಾರಕ್ಕೆ ಬಂದ ಭ್ರಷ್ಟ ಬಿಜೆಪಿ ಸರ್ಕಾರ ಸಾಲು ಸಾಲಾಗಿ ಮಾಡಿದ ಭಾನಗಡಿ ಹಾಗೂ ತನ್ನೆಲ್ಲಾ ವಿಫಲತೆಗಳನ್ನು ಮುಚ್ಚಿಕೊಂಡು ಬೇರೆಡೆಗೆ ಸೆಳೆಯುತ್ತಿದೆ. ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ, ಎನ್‌ಐಎ ಮತ್ತು ಯುಎಪಿಎ ಮುಂತಾದವುಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರ ಚಾರಿತ್ರ್ಯ ಹನನ ಮಾಡುತ್ತ, ತನ್ನನ್ನು ವಿರೋಧಿಸಿದವರನ್ನು ಜೈಲಿಗೆ ಅಟ್ಟುತ್ತಾ, ಹೇಯ ಕೆಲಸಗಳಲ್ಲಿ ತೊಡಗುತ್ತಿದೆ ಎಂದಿದ್ದಾರೆ.

ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಂಥ ಧುರೀಣರನ್ನು ಇಡಿ ಮೂಲಕ ಕಿರುಕುಳ ಕೊಡುವ ಸಂವಿಧಾನ ವಿರೋಧಿ ಜನದ್ರೋಹಿ ದುಷ್ಟ ಕೆಲಸಗಳಲ್ಲಿ ತೊಡಗುತ್ತಿದೆ. ಅದೇ ದಾರಿಯಲ್ಲಿ ಮತ್ತೊಂದು ಹೆಜ್ಜೆ ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು 8 ಗಂಟೆಗಳವರೆಗೆ ವಿಚಾರಣೆ ನಡೆಸುವ ಮೂಲಕ ಇಡಿ ಅತ್ಯಂತ ಕೀಳು ಕೆಲಸದಲ್ಲಿ ತೊಡಗಿದೆ. ಸಂಸದೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅತ್ಯಂತ ಕೆಟ್ಟ ಪರಂಪರೆಗೆ ಬಿಜೆಪಿ ನಾಂದಿ ಹಾಡಿದೆ. ಅಧಿವೇಶನದಲ್ಲಿ ಬೆಲೆ ಏರಿಕೆ, ಅವೈಜ್ಞಾನಿಕ ಜಿಎಸ್ಟಿ, ಜನ ವಿರೋಧಿ ನೀತಿಗಳನ್ನು ಎದುರಿಸಲು 56 ಇಂಚಿನ ಎದೆಗೆ ಧೈರ್ಯವಿಲ್ಲವೆಂದು ವ್ಯಂಗ್ಯವಾಡಿದ್ದಾರೆ.

ಸಂವಿಧಾನ ವಿರೋಧಿ ದೇಶದ್ರೋಹಿ ಫ್ಯಾಸಿಸ್ಟ್ ಪಕ್ಷ ಮತ್ತು ಸರ್ಕಾರಕ್ಕೆ ರಾಷ್ಟ್ರದ ಮಹಾ ಜನತೆಯೇ ತಕ್ಕ ಪಾಠ ಕಲಿಸಿ ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಸಂರಕ್ಷಿಸಿ ಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT