ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮಾಜದ ಅಭಿವೃದ್ಧಿಗೆ ಮೀಸಲಾತಿ ಅಗತ್ಯ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಆಳಂದದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿಮತ
Last Updated 6 ಏಪ್ರಿಲ್ 2021, 2:25 IST
ಅಕ್ಷರ ಗಾತ್ರ

ಆಳಂದ: ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಪಂಚಮಸಾಲಿ ಸಮಾಜದ ಸಮಗ್ರ ಅಭಿವೃದ್ಧಿಗಾಗಿ 2ಎ ಮೀಸಲಾತಿ ಅಗತ್ಯವಾಗಿದೆ. ನಮ್ಮ ಬೇಡಿಕೆಯು ನ್ಯಾಯಸಮ್ಮತವಾಗಿರುವದರಿಂದ ಮೀಸಲಾತಿ ಪಡೆಯುವರಿಗೂ ಹೋರಾಟ ನಡೆಯಲಿದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ಸೋಮವಾರ ಲಿಂಗಾಯತ ಪಂಚಮಸಾಲಿ ಸಮಾಜದ ‘ಶರಣು ಶರಣಾರ್ಥಿ’ ಜಾಥಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು 6 ತಿಂಗಳಲ್ಲಿ ನಮ್ಮ ಹೋರಾಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮುಷ್ಕರ ಸ್ಥಗಿತಗೊಳಿಸಲಾಗಿದೆ. ಈ ರೀತಿ ಜನಜಾಗೃತಿ ಜಾಥಾ ಮೂಲಕ 2ಎ ಮೀಸಲಾಯತಿ ಪಡೆಯುವರೆಗೂ ಹೋರಾಟ ಸ್ಥಗಿತಗೊಳ್ಳುವದಿಲ್ಲ ಎಂದರು.

ಧುತ್ತರಗಾಂವನ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಜಿಪಂ ಸದಸ್ಯ ಮಲ್ಲಿನಾಥ ಪಾಟೀಲ ಮದಗುಣಕಿ, ಬಿ.ಎಸ್.ಪಾಟೀಲ ನಾಗರಾಳ, ಮಲ್ಲಿನಾಥ ಯಲಶೆಟ್ಟಿ , ಸಿದ್ದರಾಮ ಅರಳಿಮರ , ಮಡಿವಾಳಪ್ಪ ದೇಸೆಟ್ಟಿ ಮಾತನಾಡಿದರು.‌

ಮುಖಂಡ ಶಂಕರರಾವ ದೇಶಮುಖ ಅಧ್ಯಕ್ಷತೆ ವಹಿಸಿದರು. ಆನಂದರಾವ ದೇಶಮುಖ, , ಶರಣಪ್ಪ ಹತ್ತರಕಿ, ಶ್ರೀಮಂತರಾವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT