ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಸಂಗಮೇಶ್ವರ ರಥೋತ್ಸವ

Last Updated 8 ಏಪ್ರಿಲ್ 2022, 5:32 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಚಿಮ್ಮನಚೋಡ ಸಂಗಮೇಶ್ವರ ರಥೋತ್ಸವ ಗುರುವಾರ ನಡೆಯಿತು. ಬೆಳಗ್ಗೆ ಅಗ್ನಿ ಪ್ರವೇಶ ಮಾಡಿದ ಭಕ್ತರು ಸಂಜೆ ತೇರು ಎಳೆದು ಹರಕೆ ತೀರಿಸಿದರು.

ಬಕ್ಕಾರೆಡ್ಡಿ ಪೊಲೀಸ್ ಪಾಟೀಲ ಮನೆಯಿಂದ ಕುಂಬಮೆರವಣಿಗೆ ಮೂಲಕ ತೇರು ಮೈದಾನಕ್ಕೆ ವಾದ್ಯಮೇಳದ ಜತೆಗೆ ಬಂದು ತೇರಿನ ಮುಂದೆ ಬಂದು ರಥಕ್ಕೆ ಪೂಜಿಸಿ ನೈವೇದ್ಯ ಸಮರ್ಪಿಸಿದ ಬಳಿಕ ರಥೋತ್ಸವ ಜರುಗಿತು. ನರನಾಳ ಹಿರೇಮಠದ ಶಿವಕುಮಾರ ಶಿವಾಚಾರ್ಯರು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಉತ್ತತ್ತಿ, ಹೂವು, ಹಣ್ಣು ನಾಣ್ಯಗಳನ್ನು ರಥದ ಮೇಲೆ ಎಸೆದು ಪುನೀತರಾದರು.

ಬೆಳಿಗ್ಗೆ ವೀರಭದ್ರೇಶ್ವರ ದೇವಾಲಯದದಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ದೇವಾಲಯಕ್ಕೆ ತಲುಪಿದ ಮೇಲೆ ಅಗ್ನಿ ಪ್ರವೇಶ ನಡೆಸಲಾಯಿತು. ಗ್ರಾಮದಲ್ಲಿ 5ದಿನಗಳ ಕಾಲ ನಿರಂತರ ಪಲ್ಲಕ್ಕಿಉತ್ಸವ ಹಾಗೂ ಭಕ್ತರಿಂದ ಅನ್ನದಾಸೋಹ ಸೇವೆನಡೆಸಲಾಯಿತು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಜಾಡರ್, ಸಂಗಾರೆಡ್ಡಿ ನರಸನ್, ಬಂಡಾರೆಡ್ಡಿ ಆಡಕಿ, ರಾಮರೆಡ್ಡಿ ಪಾಟೀಲ, ಶಂಕರ ರೇಕುಳಗಿ, ಗೋಪಾಲರೆಡ್ಡಿ ಮದರೆಡ್ಡಿ, ಸುಭಾಷ ಬಡಿಗೇರ್, ಸಿದ್ದು ದುಬಲಗುಂಡಿ, ಶಾಂತುರೆಡ್ಡಿ ನರನಾಳ, ರಾಘವೇಂದ್ರರೆಡ್ಡಿ ಗುಡೆಪನೋರ್, ಗೋಪಾಲ ಬಾಜೇಪಳ್ಳಿ, ವಿಶ್ವನಾಥರೆಡ್ಡಿ ಪೀರೆಡ್ಡಿ, ರವಿ ಮೋತಿರಾಮ ನಾಯಕ್, ಸಂತೋಷ ಗೌನಳ್ಳಿ, ಶರಣರೆಡ್ಡಿ ವರೆಡ್ಡಿ, ಆನಂದ ಬೆಡಸೂರ, ಜಗದೀಶ ತೆಲಕಾಂಪಳ್ಳಿ, ಶರಣು ಕಲ್ಪಿ, ಮಲ್ಲು ಕೂಡಾಂಬಲ್, ವಿಜಯಭರತ, ಜಗನ್ನಾಥ ಹೊಸಮನಿ, ಪ್ರಕಾಶ ನೂಲಕರ್, ಬಂಡಪ್ಪ ಯಂಗನೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT