ಅಫಜಲಪುರ: ‘ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬದುಕು ಅರ್ಥಪೂರ್ಣವಾಗಲಿದೆ’ ಎಂದು ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂ ತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬಂಜಾರ ಸಮುದಾಯದವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆಗಳು, ಸ್ವಯಂ ಉದ್ಯೋಗ ಯೋಜನೆಗಳಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ‘ಸೇವಾಲಾಲರ ಆದರ್ಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ನ್ಯಾಯ, ಸಹಬಾಳ್ವೆ ಹಾಗೂ ಸರ್ವರ ಕಲ್ಯಾಣಕ್ಕಾಗಿ ಶ್ರಮಿಸುವ ಸಂಕಲ್ಪವನ್ನು ಕೈಗೊಳ್ಳೊಣ’ ಎಂದರು.

ನವ ಶಕ್ತಿ ಪುಣ್ಯಾಶ್ರಮ ಶಕ್ತಿಪೀಠ ಚೌಡಾಪೂರದ ಮುರಾಹರಿ ಮಹಾರಾಜರು, ಲಾಡ ಚಿಂಚೋಳಿ ಸುನೀಲ ಮಹಾರಾಜ ಹಾಗೂ ಶಂಕರ ಪೂಜಾರಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಬಂಜಾರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅಪ್ಪು.ಬಿ.ರಾಠೋಡ, ಜಿಲ್ಲಾಧ್ಯಕ್ಷ ನಾಥರಾಮ.ಎಲ್.ರಾಠೋಡ, ಜಿಲ್ಲಾ ಉಪಾಧ್ಯಕ್ಷ ರಾಕೇಶ ಟಿ.ರಾಠೋಡ, ಶಂಕರ ದಾಮುಲು ರಾಠೋಡ, ಸುಭಾಷ, ಸಿ.ರಾಠೋಡ, ತಾರು.ಎಚ್.ಜಾಧವ, ಶ್ರೀಧರ ಡಿ.ರಾಠೋಡ, ವಿನೋದ ಎಂ.ರಾಠೋಡ ಸೇರಿದಂತೆ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಅದ್ದೂರಿ ಮೆರವಣಿಗೆ ಜರುಗಿತು.

ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗ್ರಾಪಂಗಳಲ್ಲಿ ಸೇವಾಲಾಲ್ ಜಯಂತಿ ಆಚರಿಲಾಯಿತು

‘ಕಾಯಕದ ಮಹತ್ವ ಸಾರಿದ ಸೇವಾಲಾಲ್’

ಜೇವರ್ಗಿ: ‘ಅಲೆಮಾರಿಗಳಾಗಿ ಜೀವನ ನಡೆಸುತ್ತಿದ್ದ ಬಂಜಾರ ಸಮುದಾಯಕ್ಕೆ ಒಂದೇ ಸ್ಥಳದಲ್ಲಿ ನೆಲೆಸಿ ಸ್ವಾಭಿಮಾನದಿಂದ ದುಡಿದು ಬದುಕುವ ಮಾರ್ಗವನ್ನು ತೋರಿದ ಮಹಾನ್ ಸಮಾಜಗುರು ಸೇವಾಲಾಲ್ ಮಹಾರಾಜ ಅವರ ಕೊಡುಗೆ ಅಪಾರವಾಗಿದೆ’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಅವರು ಅಭಿಪ್ರಾಯ ಪಟ್ಟರು.

ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಲಾದ ಸೇವಾಲಾಲ್ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ಬ್ರಿಟಿಷ್ ಸರ್ಕಾರದ ಕುತಂತ್ರದಿಂದ ಬಂಜಾರ ಸಮುದಾಯವನ್ನು ‘ಅಪರಾಧಿಕ ಬುಡಕಟ್ಟು’ ಎಂದು ಹಣೆಪಟ್ಟಿ ಹಾಕಿ ಕಾಡು-ಮೇಡು ಅಲೆಯುವ ಸ್ಥಿತಿಗೆ ತಳ್ಳಲಾಗಿತ್ತು. ಸಮುದಾಯ ಸಂಪೂರ್ಣ ಅತಂತ್ರ ಸ್ಥಿತಿಯಲ್ಲಿದ್ದಾಗ, ಈ ದೌರ್ಭಾಗ್ಯಕರ ಬದುಕಿನಿಂದ ಹೊರಬರಲು ಒಂದೇ ಸ್ಥಳದಲ್ಲಿ ನೆಲೆಸುವುದು ಸೂಕ್ತ ಮಾರ್ಗ ಎಂದು ದಾರಿ ತೋರಿದವರು ಸೇವಾಲಾಲ್ ಮಹಾರಾಜ್’ ಎಂದು ತಿಳಿಸಿದರು.

ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಸೇವಾ ಲಾಲ್ ಮಹಾರಾಜ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ದಾನಪ್ಪಗೌಡ ಹಳಿಮನಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಉಮೇಶ ಶರ್ಮಾ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಮಾಜದ ಮುಖಂಡರಾದ ಬಹಾದ್ದೂರ ರಾಠೋಡ, ತುಕಾರಾಮ ರಾಠೋಡ ಸೇರಿದಂತೆ ಇತರರು
ಉಪಸ್ಥಿತರಿದ್ದರು.

ಸಂತ ಸೇವಾಲಾಲ್ ಮಹಾರಾಜ್ ಒಬ್ಬ ದಾರ್ಶನಿಕ ಸಂತರಾಗಿದ್ದು, ಅವರು ಭಾರತದಲ್ಲಿನ ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರಾಗಿದ್ದರು ಅಪ್ಪು ಬಿ.ರಾಠೋಡ, ಬಂಜಾರಾ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ

‘ಸತ್ಯ, ಧರ್ಮ ಪಾಲನೆಯೇ ಸಂತರಿಗೆ ನೀಡುವ ಗೌರವ’

ವಾಡಿ: ‘ಯಾವುದೇ ಕಾರಣಕ್ಕೂ ಸತ್ಯ, ನ್ಯಾಯ ಮತ್ತು ಧರ್ಮದ ಮಾರ್ಗದಲ್ಲೇ ನಡೆಯುತ್ತೇನೆ ಎಂದು ಪ್ರತಿಜ್ಞೆ ಮಾಡಿದರೆ ಸಾಕು ಅದುವೇ ಸೇವಾಲಾಲ್ ಸಹಿತ ಹಲವು ಸಂತರಿಗೆ ನೀಡುವ ಗೌರವವಾಗಿದೆ’ ಎಂದು ಪೌರಾಗಡದ ಬಾಬುಸಿಂಗ್ ಮಹಾರಾಜ್ ಹೇಳಿದರು.

ಪಟ್ಟಣದಲ್ಲಿ ರವಿವಾರ ಜರುಗಿದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ನಾಗಮೋಹನದಾಸ್ ವರದಿ ಜಾರಿಯಲ್ಲಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಲೋಪ ಮಾಡಿದ್ದು, ಯಾವ ಸಮುದಾಯಕ್ಕೂ ಇದರಿಂದ ತೃಪ್ತಿ ಇಲ್ಲದಂತಾಗಿದೆ. 80 ಲಕ್ಷ ಜನಸಂಖ್ಯೆ ಕರ್ನಾಟಕದಲ್ಲಿ ಇದ್ದರೂ ಸರಿಯಾದ ಪ್ರಾತಿನಿಧ್ಯ ಸಿಗದ ಕಾರಣ ಬಂಜಾರ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿಯುವಂತಾಗಿದೆ’ ಎಂದರು.

ಮಾಜಿ ಸಚಿವ ಬಾಬುರಾವ್ ಚವ್ಹಾಣ ಮಾತನಾಡಿದರು. ಮುಗುಳ ನಾಗಾಂವ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದ ಜೇಮ್ ಸಿಂಗ್ ಮಹಾರಾಜ, ಚೌಡಾಪುರದ ಮುರಾರಿ ಮಹಾರಾಜ್, ಹಲಕರ್ಟಿ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯ, ಅಳ್ಳೊಳ್ಳಿ ಸಾವಿರದೇವರ ಮಠದ ಸಂಗಮನಾಥ ಸ್ವಾಮಿ, ರೆಸ್ಟ್ ಕ್ಯಾಂಪ್ ತಾಂಡಾದ ಠಾಕೂರ ಮಹಾರಾಜ, ಭಂಕೂರು ತರಿ ತಾಂಡಾದ ಅನಿಲ್ ಸಾಹೇಬ್ ಮಹಾರಾಜ, ಸಿದ್ದೇಶ್ವರ ಸಂಸ್ಥಾನ ಮಠದ ರಾಜಶೇಖರ್ ಶಿವಾಚಾರ್ಯ, ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ನ್ಯಾಯಧೀಶ ಸುಭಾಷಚಂದ್ರ ರಾಠೋಡ, ಸುಭಾಸ್ ರಾಠೋಡ ಮುಖಂಡರಾದ ಅರವಿಂದ ಚವ್ಹಾಣ, ವಿಠ್ಠಲ ವಾಲ್ಮೀಕ್ ನಾಯಕ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.