ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಯಲ್ಲಿ ಮನುವಾದ, ಬೀದಿಯಲ್ಲಿ ಭೀಮವಾದ’

ಭೀಮ್ ಆರ್ಮಿ ನಡೆ ಸಂವಿಧಾನ ರಕ್ಷಣೆ ಕಡೆ ಸಮಾವೇಶ
Last Updated 16 ಮಾರ್ಚ್ 2022, 2:16 IST
ಅಕ್ಷರ ಗಾತ್ರ

ಕಮಲಾಪುರ: ‘ನೂರಾರು ದೇವರನ್ನು ಪೂಜಿಸುವುದು, ಮಂತ್ರ ಪಠಿಸುವುದು ಬಿಡದ ದಲಿತರು ಮನೆಯಲ್ಲಿ ಮನುವಾದ ಇಟ್ಟುಕೊಂಡು ಬೀದಿಗಳಲ್ಲಿ ಮಾತ್ರ ಭೀಮವಾದ ಹೇಳುತ್ತಿದ್ದಾರೆ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕೋಹಿನೂರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಭೀಮ್ ಆರ್ಮಿ ನಡೆ ಸಂವಿಧಾನ ರಕ್ಷಣೆ ಕಡೆ ಬ್ರಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

‘ಯಾವ ದೇವರು ನಿಮಗೆ ಸ್ವಾತಂತ್ರ್ಯ, ಸಮಾನತೆ ಕೊಡಲಿಲ್ಲ ಅಂಬೇಡ್ಕರ್ ಅವರು ಕೊಟ್ಟಿದ್ದು. ದೇವರಿಂದಾಗುವ ಶೋಷಣೆ ತಪ್ಪಿಸಬೇಕಾದರೆ ಜನ ಪ್ರಜ್ಞಾನವಂತರಾಗಬೇಕು. ದೇವರು ಗುಡಿಗಳಲ್ಲಿಲ್ಲ. ನೊಂದವರ ಮನದಲ್ಲಿದ್ದಾನೆ, ಭಾರತ ಬದಲಾಗುವುದು ಮಠ, ಮಸೀದಿ, ಚರ್ಚ್‌ಗಳಿಂದಲ್ಲ ಮತದಾನದಿಂದ. ಆ ಮತದಾನ ಹಕ್ಕನ್ನು ಕೊಟ್ಟಿರುವುದು ಬಾಬಾ ಸಾಹೇಬ್‌ ಅಂಬೇಡ್ಕರರು. ಅದನ್ನು ನಾವು ಹಣ ಹೆಂಡಕ್ಕೆ ಮಾರಿಕೊಳ್ಳುತ್ತಿರುವುದು ವಿಪರ್ಯಾಸ’ ಎಂದರು.

ನಮ್ಮದು ಆಯುಧಗಳಿದಲ್ಲ ಬುದ್ಧ, ಬಸವ, ಅಂಬೇಡ್ಕರ್‌, ಫುಲೆಯವರು ಸಾರಿದ ಶಾಂತಿ, ಸಮಾನತೆ, ಸೌಹಾರ್ದತೆ, ಸಹಕಾರ ಮನೋಭಾವನೆಯ ಆದರ್ಶಗಳ ಭಾರತ, ಯುದ್ಧೋನ್ಮಾದದಲ್ಲಿರುವ ರಾಷ್ಟ್ರಗಳಿಗೆ ಬುದ್ಧನ ಸಂದೇಶಗಳನ್ನು ಸಾರುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ ಮಾತನಾಡಿ, ಅಪಾರ ನೋವುಂಡ ಬಾಬಾ ಸಾಹೇಬ್‌ ಅಂಬೇಡ್ಕರ್ ಸೋಶಿತ ಸಮಾಜಕ್ಕೆ ಸಂವಿಧಾನಾತ್ಮಕ ಹಕ್ಕುಗಳನ್ನು ಒದಗಿಸಿದ್ದಾರೆ. 150 ದೇಶದವರು ಭಾರತ ಸಂವಿಧಾನವನ್ನು ಶ್ರೇಷ್ಠ ಎಂದು ಹೇಳಿದ್ದಾರೆ. ಅಂಥ ಸಂವಿದಾನ ರಕ್ಷಣೆಗೆ ಸಂಘಟನಾತ್ಮಕ ಹೋರಾಟ ಅಗತ್ಯ. ಸಂಘಟನೆಗಳು ಚದುರಿ ಹೋದರೆ ನಮ್ಮ ಬಲ ಕುಂದುತ್ತದೆ. ಈಗಾಗಲೇ ರಾಜ್ಯದಲ್ಲಿ 3960 ದಲಿತ ಪರ ಸಂಘಟನೆಗಳಿವೆ ಹೊಸ ಸಂಘಟನೆಗಳನ್ನು ಹುಟ್ಟು ಹಾಕಬೇಡಿ. ಇರುವ ಸಂಘಟನೆಗಳಲ್ಲಿ ಸಮನ್ವಯತೆ ತರಬೇಕು ಎಂದರು.

ಅಣದೂರಿನ ಭಂತೇಜಿ, ಸಹಾಯಕ ಪ್ರಾಧ್ಯಾಪಕ ಈಶ್ವರ ಕರಿಗೋಳೇಶ್ವರ, ಭೀಮ್ ಆರ್ಮಿ ಕಮಲಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀರ ಹೊನ್ನಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಜಿಡಗಾ, ಡಾ.ಪ್ರಕಾಶ ಹಾಗರಗಿ, ತಾ.ಪಂ ಇಒ ಮಂಜುನಾತ ಮುಗಳೆ, ಕಾಂಗ್ರೆಸ್‌ ಮುಖಂಡ ಗುರುರಾಜ ಮಾಟೂರ, ಗ್ರಾ.ಪಂ ಮಾಜಿ ಅಧ್ಯಕ್ಷ ನಿಂಗಪ್ಪ ಪ್ರಬುದ್ಧಕರ್‌, ರವಿ ನೂಲಕರ್ ಶರಣು ಗೌರೆ, ವಿದ್ಯಾಧರ ಮಾಳಗೆ, ರಮೇಶ ಬೆಳಕೋಟಿ, ಸತೀಶ ಜಾಧವ್‌
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT