ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಪರಿವರ್ತನೆ; ಡಾ.ಅಪ್ಪಗೆರೆ

ಆಳಂದ; ವಿವಿಧೆಡೆ ಸಾವಿತ್ರಿ ಬಾಯಿ ಫುಲೆ ಜಯಂತಿ
Last Updated 4 ಜನವರಿ 2022, 4:08 IST
ಅಕ್ಷರ ಗಾತ್ರ

ಆಳಂದ: ಶಿಕ್ಷಣದಿಂದ ಮಾತ್ರವೇ ವ್ಯಕ್ತಿ, ಸಮಾಜ ಹಾಗೂ ರಾಷ್ಟ್ರದಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮ ಶೇಖರ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಕನ್ಯಾ ಪ್ರೌಢ ಶಾಲೆಯಲ್ಲಿ ಸೋಮವಾರ ದಲಿತ ಸೇನೆ ತಾಲ್ಲೂಕು ಘಟಕದಿಂದ ಆಯೋಜಿಸಿದ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣದಿಂದ ವಂಚಿತರಾದ ಬಹುಸಂಖ್ಯಾತ ಸಮುದಾಯಕ್ಕೆ ಅಕ್ಷರದ ಅರಿವೂ ಮೂಡಿಸುವಲ್ಲಿ ಜ್ಯೋತಿಭಾ ಫುಲೆ, ಸಾವಿತ್ರಿ ಬಾಯಿ ಫುಲೆ ದಂಪತಿ ಸಾಕಷ್ಟು ಸವಾಲು ಎದುರಿಸಿದ್ದರು. ಅಂದು ಅವರು ಪಟ್ಟ ಪರಿಶ್ರಮ ಇಂದು ಸಾರ್ಥಕವಾಗುತ್ತಿದೆ ಎಂದರು.

ಬುದ್ಧ, ಬಸವಣ್ಣ, ಗಾಂಧೀಜಿ, ಡಾ.ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕರು ವೈಚಾರಿಕ ಹಾಗೂ ಸಮಾನತೆಯ ಸಮಾಜ ಕಟ್ಟಲು ಯತ್ನಿಸಿದರು. ನಮ್ಮ ವಿವೇಕವನ್ನು ಜಾಗ್ರುತಗೊಳಿಸಿದರು ಎಂದು ಹೇಳಿದರು.

ನಿಂಬರ್ಗಾ ಪಿಎಸ್ಐ ಸುವರ್ಣಾ ಮಲಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸೇನೆ ತಾಲ್ಲೂಕಾಧ್ಯಕ್ಷ ಧರ್ಮಾ ಬಂಗರಗಾ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ದಯಾನಂದ ಶೇರಿಕಾರ, ಮಲ್ಲಿಕಾರ್ಜುನ ಬೋಳಣಿ, ಆಶಾ ನಸ್ರೀನ್, ಶಿಕ್ಷಕರಾದ ಮಧುಕರ ಪಾತ್ರೆ, ಮಲ್ಲಿನಾಥ ಖಜೂರಿ, ರಾಣಪ್ಪ ಸಂಗನ್, ಕಲ್ಯಾಣಿ ತುಕಾಣೆ, ಚಂದ್ರಶಾ ಗಾಯಕವಾಡ, ನೀಲಪ್ಪ ಬಬಲೇಶ್ವರ, ಸುನೀತಾ ಗಡಬಳ್ಳಿ, ಮಹೇಶ ಕೋಚಿ, ಅಣ್ಣಪ್ಪ ಹಾದಿಮನಿ ಇದ್ದರು.

ಸಂಬುದ್ಧ ಕಾಲೇಜು: ಪಟ್ಟಣದ ಸಂಬುದ್ಧ ಕಾಲೇಜಿನಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.

ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮ ಶೇಖರ ಮಾತನಾಡಿ ‘ಫುಲೆ ದಂಪತಿ ಸಮಾಜ ಸುಧಾರಣಾ ಹೋರಾಟ, ಚಿಂತನೆಗಳು ಪ್ರಸ್ತೂತ ಎಂದರು.

ಪ್ರಾಚಾರ್ಯ ಡಾ.ಶಿವಲಾಲ ಹತ್ತಿ, ಸಂಜಯ ಪಾಟೀಲ, ಶರಣು ಪರೇಣಿ, ಮಹಾದೇವಿ ಪಾಟೀಲ, ಪ್ರಮೋದ ಪಂಚಾಳ, ಸಿದ್ದಾರ್ಥ ಹಸೂರೆ, ಬಸವ ರಾಜ ಪೂಜಾರಿ, ಸುಖಮುನಿ ಪಾಟೀಲ ಇದ್ದರು.

ಕಿತ್ತೂರು ರಾಣಿ ಚೆನ್ನಮ್ಮ ಶಾಲೆ: ಪಟ್ಟಣದ ಹೊರವಲಯದಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು.

ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀಶೈಲ ಮಾಡ್ಯಾಳೆ ಅವರು ಉಪನ್ಯಾಸ ನೀಡಿದರು. ಪ್ರಾಚಾರ್ಯ ಡಾ.ರಾಜಶೇಖರ ಮಾಂಗ, ಬದ್ರಿನಾಥ ಮುಡಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT