ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಮಳಖೇಡ ಸೇತುವೆ ಮೇಲೆ ವಾಹನ ಸಂಚಾರ ಆರಂಭ

Published 26 ಜುಲೈ 2023, 7:20 IST
Last Updated 26 ಜುಲೈ 2023, 7:20 IST
ಅಕ್ಷರ ಗಾತ್ರ

ಸೇಡಂ(ಕಲಬುರಗಿ): ತಾಲ್ಲೂಕಿನ ಮಳಖೇಡ ಸೇತುವೆ ಮೇಲಿಂದ ಕಾಗಿಣಾ ನದಿ ನೀರು ಇಳಿಮುಖವಾಗಿದ್ದರಿಂದ ಮಳಖೇಡ ಸೇತುವೆ ಮೇಲೆ ವಾಹನ ಸಂಚಾರ ಬುಧವಾರ ಆರಂಭಗೊಂಡಿದೆ.

ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಮಂಗಳವಾರ ಸೇತುವೆ ಮೇಲೆ ನೀರು ಹರಿದಿದ್ದರಿಂದ ರಾಜ್ಯ ಹೆದ್ದಾರಿ 10 ಸೇಡಂ-ಕಲಬುರಗಿ ಸಂಚಾರ ಸ್ಥಗಿತಗೊಂಡಿತ್ತು. ರಾತ್ರಿಯಿಡಿ ಕೆಲ ವಾಹನಗಳು ಮಳಖೇಡದಲ್ಲಿ ಉಳಿದರೆ, ಕೆಲವು ವಾಹನಗಳು ಚಿತ್ತಾಪುರ, ಶಹಬಾದ್ ಮೇಲಿಂದ ತೆರಳಿದ್ದವು. ಬುಧವಾರ ಬೆಳಿಗ್ಗೆಯಿಂದ ವಾಹನ ಸಂಚಾರ ಎಂದಿನಂತೆ ಆರಂಭಗೊಂಡಿದೆ. ಸಂಚಾರ ಮುಕ್ತವಾಗಿದೆ.

ಹೊಲಗಳಿಗೆ ನುಗ್ಗಿದ ನೀರು:ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ನದಿ ದಂಡೆಗಳ ಸಂಗಾವಿ (ಎಂ), ಬಿಬ್ಬಳ್ಳಿ ಕಾಚೂರ, ಯಡಗಾ, ಹಾಬಾಳ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ನೀರು‌ ನುಗ್ಗಿದೆ.

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಪ್ರವಾಹ ಕಡಿಮೆಯಾಗಿದ್ದರಿಂದ ಸೇತುವೆ ಮೇಲಿನ ಸಾರಿಗೆ ಸಂಚಾರ ಬುಧವಾರ ಬೆಳಗ್ಗೆ ಯಥಾರೀತಿ ಶುರುವಾಗಿದೆ. ಬಸ್, ಲಾರಿ, ಇತರೆ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT