ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ | ಶ್ರೀ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕ ಸಾವು

Published 17 ಜೂನ್ 2024, 5:36 IST
Last Updated 17 ಜೂನ್ 2024, 5:36 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಕೋಡ್ಲಾ- ಬೆನಕನಳ್ಳಿ ಗ್ರಾಮದಲ್ಲಿರುವ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣ ಚೋಟಿಗಿರಣಿ ನಿವಾಸಿ, ಕಾರ್ಮಿಕ ರವಿ ತಂದೆ ಪುರು ರಾಠೋಡ (42) ಮೃತಪಟ್ಟಿದ್ದಾರೆ. 

ರವಿ ಅವರು ಭಾನುವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಕಂಪನಿಯಲ್ಲಿನ ಹೈಡ್ರಾ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಳೆದ 5 ವರ್ಷಗಳಿಂದ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸೇಡಂ ಚೋಟಿಗಿರಣಿ ನಿವಾಸಿಗಳಾದ ಅಶೋಕ ಪವಾರ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ, ವೆಂಕಟೇಶ ಪಾಟೀಲ ಸೇರಿದಂತೆ ಭಾರತೀಯ ಮಜದೂರ್ ಸಂಘ, ಶ್ರೀ ಸಿಮೆಂಟ್ ಸ್ಟಾಫ್ ಅಂಡ್ ಜನರಲ್ ವರ್ಕರ ಸಂಘ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದರು.

ಮೃತ ಕಾರ್ಮಿಕನ ಕುಟುಂಬಕ್ಕೆ ₹22 ಲಕ್ಷ ಪರಿಹಾರ ಮತ್ತು ಅಂತ್ಯಸಂಸ್ಕಾರಕ್ಕೆ ₹50 ಸಾವಿರ ಒಪ್ಪಂದವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ಕಂಪನಿ ಅಧಿಕಾರಿ ಶಿವಯ್ಯಸ್ವಾಮಿ, ಮುಖಂಡರಾದ ಪ್ರೇಮ ಚವಾಣ್, ಮನೋಜ್ ರಾಠೋಡ, ಗೋಪಾಲ, ಸುನೀಲ ಪವಾರ, ರಾಮಶೆಟ್ಟಿ ಕಾಳಗಿ, ಧರ್ಮರಾಜ್, ಅಜಯ ಜಾಧವ, ಸಂದೀಪ ಜಾಧವ, ಕಾಶ ಜಾಧವ, ಕುಮಾರ ಪವಾರ, ಬಸವರಾಜ ರೆಡ್ಡಿ, ಸಿದ್ದಣ್ಣ ಹೊಸಮನಿ, ಶೇಖರರೆಡ್ಡಿ ನೇರ್ಲಗಿ, ಬಲವಂತ ರೆಡ್ಡಿ, ಕಾಶಿನಾಥ ಪಾಪಳ್ಳಿ, ಮಲ್ಲಪ್ಪ ದೊಣಗಾವ, ನಾಗರೆಡ್ಡಿ ಮುಂಡರಗಿ, ಶಿವಕುಮಾರ್ ಅವಂಟಿ, ಕಾಶಪ್ಪ ಜೋಗಿ, ವಿನೋದ್ ಕುಮಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT