ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಸರಣಿ ಕಳ್ಳತನ: ಆರು ಮಂದಿ ಬಂಧನ

Published : 14 ಜುಲೈ 2024, 6:13 IST
Last Updated : 14 ಜುಲೈ 2024, 6:13 IST
ಫಾಲೋ ಮಾಡಿ
Comments
ಅತ್ತೆ ಮನೆಯಲ್ಲಿ ಚಿನ್ನಾಭರಣ ಕದ್ದ ಅಳಿಯ!
ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಅಲ್ಮೇರಾದಲ್ಲಿ ಇರಿಸಿದ್ದ ಚಿನ್ನಾಭರಣ ಕದ್ದ ಆರೋಪದಡಿ ಮಹಿಳೆಯೊಬ್ಬರು ತನ್ನ ಅಣ್ಣ ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಲಿಂಗೇಶ್ವರ ಕಾಲೊನಿ ನಿವಾಸಿ ಯಲಗೂಡ ಗ್ರಾಮದ ಉಪ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಸುರಕ್ಷಣಾಧಿಕಾರಿ ಮಹಾನಂದಾ ಶಿವಾನಂದ ಅವರ ಮನೆಯಲ್ಲಿ ಕಳುವಾಗಿದೆ. ಮಹಾನಂದಾ ಅವರ ಅಣ್ಣನ ಮಗ ಅಂಬರೇಶ ತಡಕಲ್ ವಿರುದ್ಧ ಸಬ್‌ ಅರ್ಬನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 8ರಂದು ಅಂಬರೀಶ್ ಮಹಾನಂದಾ ಮನೆಗೆ ಬಂದಿದ್ದರು. ಮನೆಯ ಸದಸ್ಯರು ಹೊರ ಹೋದಾಗ ಅಂಬರೀಶ್ ಮನೆಯ ಅಲ್ಮೇರಾದಲ್ಲಿ ಇರಿಸಿದ್ದ ₹ 2.56 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಶಂಕೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ದಿನ ಎರಡು ಮನೆಗಳಲ್ಲಿ ಕಳವು
ಚಿತ್ತಾಪುರ: ಪಟ್ಟಣದಲ್ಲಿ ಮನೆ ಕಳ್ಳರ ಹಾವಳಿ ಶುರುವಾಗಿದ್ದು ಎರಡು ಮನೆಗಳಲ್ಲಿ ಕಳ್ಳತನ ಹಾಗೂ ಮೂರು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಆಶ್ರಯ ಬಡಾವಣೆಯ ಸೂರನದೇವಿ ದ್ಯಾವಪ್ಪ ಅವರ ಮನೆಯಲ್ಲಿನ 5 ಗ್ರಾಂ. ಚಿನ್ನ ಮತ್ತು ₹50 ಸಾವಿರ ನಗದು ಕಳುವಾಗಿದೆ. ಅದೇ ಬಡಾವಣೆಯ ಮೂರು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ವೆಂಕಟೇಶ್ವರ ಬಡಾವಣೆಯ ಸಂಜಯಿನಿ ಶರಣಬಸಪ್ಪ ಅವರ ಮನೆಯಲ್ಲಿ 18 ಗ್ರಾಂ. ಬಂಗಾರ 32 ತೊಲೆ ಬೆಳ್ಳಿ ಹಾಗೂ ₹42 ಸಾವಿರ ನಗದು ಕಳ್ಳರು ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಸಿಪಿಐ ಚಂದ್ರಶೇಖರ ತಿಗಡಿ ಪಿಎಸ್ಐ ಶ್ರೀಶೈಲ ಅಂಬಾಟಿ ಪಿಎಸ್ಐ ಚಂದ್ರಾಮಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಐವರ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಗಣೇಶ ನಗರದಲ್ಲಿ ಶುಕ್ರವಾರ ಮಧ್ಯರಾತ್ರಿ 2.40ರ ಸುಮಾರಿಗೆ ಐವರು ಮುಖ ಮರೆಮಾಚಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಮನೆಯೊಂದರ ಮುಂದೆ ಅಳವಡಿಸಿದ್ದ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT