ಭಾನುವಾರ, ಮೇ 22, 2022
22 °C
ಶರಣ ಸಂಗಮ ಕಾರ್ಯಕ್ರಮದಲ್ಲಿ ಡಾ.ಈಶ್ವರ ಮಂಟೂರ ಅಭಿಮತ

ಜೇವರ್ಗಿ: ವಚನ ಸಾಹಿತ್ಯಕ್ಕೆ ಷಣ್ಮುಖ ಶಿವಯೋಗಿ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಷಣ್ಮುಖ ಶಿವಯೋಗಿಗಳು 800ಕ್ಕೂ ಅಧಿಕ ವಚನಗಳನ್ನು ರಚಿಸಿ ವಚನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಜಮಖಂಡಿಯ ಬಸವಜ್ಞಾನ ಗುರುಕುಲದ ಡಾ.ಈಶ್ವರ ಮಂಟೂರ ಹೇಳಿದರು.

ಬಸವ ಕೇಂದ್ರ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಬಸವಾದಿ ಶರಣರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.

ಸಗರನಾಡಿನ ಹೆಬ್ಬಾಗಿಲು ಎನಿಸಿಕೊಂಡಿರುವ ಜೇವರ್ಗಿ ವಚನ ಸಾಹಿತ್ಯದ ತವರೂರು. ಶರಣರ ಎಲ್ಲಾ ಆದರ್ಶಗಳನ್ನ ಅಳವಡಿಸಿಕೊಂಡ ಷಣ್ಮುಖ ಶಿವಯೋಗಿಗಳು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದು ತಿಳಿಸಿದರು.

ಬಸವ ಕೇಂದ್ರದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾಮಾತನಾಡಿ, ಷಣ್ಮುಖ ಶಿವಯೋಗಿಗಳು ತಾತ್ವಿಕ ತಳಹದಿ ಮೇಲೆ ಸಾತ್ವಿಕ ಸಮಾಜ ನಿರ್ಮಿಸಿದ್ದಾರೆ. ಅವರ ವಚನ ಸಾಹಿತ್ಯವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಸದುದ್ದೇಶವನ್ನು ಬಸವ ಕೇಂದ್ರ ಹೊಂದಿದೆ ಎಂದರು.

ಪುರಸಭೆ ಅಧ್ಯಕ್ಷೆ ಕಸ್ತೂರಿಬಾಯಿ ಸಾಹೇಬಗೌಡ ಕಲ್ಲಾ, ಉಪಾಧ್ಯಕ್ಷ ರಾಜು ರದ್ದೇವಾಡಗಿ ಹಾಗೂ ಕೊರೊನಾ ವಾರಿಯರ್ಸಗಳಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಸಿದರಾಯ ಭೋಸಗಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಜೇವರ್ಗಿ ಪೊಲೀಸ್ ಸಬ್ ಇನ್ಸಪೆಕ್ಟರ್ ಸಂಗಮೇಶ ಅಂಗಡಿ ಅವರನ್ನು ಬಸವ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಬಸವ ಕೇಂದ್ರದ ಗೌರವಾಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ, ಷಣ್ಮುಖಪ್ಪ ಹಿರೇಗೌಡ, ಅವ್ವಣ್ಣಗೌಡ ಪಾಟೀಲ ಯಲಗೋಡ, ವಿಶ್ವನಾಥ ಡೋಣೂರ, ವೀರಣ್ಣ ಭೂತಪೂರ, ನಿಂಗಣ್ಣ ಹಳಿಮನಿ, ಸಂತೋಷ ಹರವಾಳ, ಸತಿಶಬಾಬು ಹರವಾಳ, ಮಲ್ಲಿಕಾರ್ಜುನ ಬಿರಾದಾರ, ಭಗವಂತ ರಾಯ, ಮಲ್ಲಣ್ಣ ಗೌಡ,ಮಲ್ಕಣ್ಣಗೌಡ ಹೆಗ್ಗಿನಾಳ, ಬಿ.ಎನ್.ಪಾಟೀಲ, ವಿಜಯ ಕುಮಾರ ಪಾಟೀಲ, ಗುರುಗೌಡ ಮಾಲಿಪಾಟೀಲ, ಸಾಹೇಬಗೌಡ ಕಡ್ಲಿ, ರಾಮಣ್ಣ ತೊನಸಳ್ಳಿಕರ್, ಅಖಂಡೆಪ್ಪ ಕಲ್ಲಾ, ಶಾಮ ಮಂದ್ರವಾಡ, ಬಸವರಾಜ ಕಲ್ಲಾ, ಮಲ್ಲಿಕಾರ್ಜುನ ಇದ್ದರು.

ಶ್ರುತಿ ಬಿಳವಾರ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಚನ್ನಯ್ಯ ಹಿರೇಮಠ ಅರಳಗುಂಡಗಿ, ರಾಜು ವಚನ ಗಾಯನ ನಡೆಸಿಕೊಟ್ಟರು. ಮಹಾಂತ ಸಾಹು ಹರವಾಳ ಸ್ವಾಗತಿಸಿದರು. ಸದಾನಂದ ಪಾಟೀಲ ನಿರೂಪಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು