ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣ ಮಾಸದ ಪುರಾಣ ಪ್ರವಚನ ರದ್ದು

Last Updated 19 ಜುಲೈ 2020, 16:57 IST
ಅಕ್ಷರ ಗಾತ್ರ

ಕಲಬುರ್ಗಿ: ಮಲ್ಲಿಕಾರ್ಜುನ ದೇವಾಲಯಲ್ಲಿ ಈ ವರ್ಷ ಶ್ರಾವಣ ಮಾಸದ ಅಂಗವಾಗಿ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು ರದ್ದು ಪಡಿಸಲು ನಿರ್ಧರಿಸಲಾಗಿದೆ ಎಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ತಿಳಿಸಿದ್ದಾರೆ.

ಕಾಲೊನಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ತಡೆಗಟ್ಟುವ ಏಕೈಕ ಮಾರ್ಗವೆಂದರೆ ಮುಂಜಾಗ್ರತೆಯ ಮದ್ದು ಎಂಬಂತೆ ಗುಡಿ, ಗುಂಡಾರಗಳಲ್ಲಿ ಸಭೆ, ಸಮಾರಂಭ ಮಾಡಬಾರದು ಎಂಬ ಸರ್ಕಾರದ ಆದೇಶದ ಪ್ರಯುಕ್ತ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಸಭೆಯ ಅಧ್ಯಕ್ಷತೆ ವಹಿಸಿ ದ್ದರು, ಉಪಾಧ್ಯಕ್ಷ ಉಮೇಶ ಶಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಶಿವರಾಜ ಅಂಡಗಿ ಸೊಸೈಟಿಯ ಜಮಾ–ಖರ್ಚಿನ ಲೆಕ್ಕಪತ್ರದ ಬಜೆಟ್ ಮಂಡಿಸಿದರು.

ಅಣವೀರಪ್ಪ ಮುಗಳಿ, ಬಸವಂ ತರಾವ ಜಾಬಶೆಟ್ಟಿ , ಮಲ್ಲಿಕಾರ್ಜುನ ನಾಗಶೆಟ್ಟಿ , ಶಾಂತಯ್ಯ ಬೀದಿಮನಿ, ಗುರುಲಿಂಗಯ್ಯ ಮಠಪತಿ, ಸುಭಾಷ್ ಮಂಠಾಳೆ, ಕಾಶಿನಾಥ ಚಿನ್ಮಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT