ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಜಿಲ್ಲಾಧಿಕಾರಿ ಮನೆಯಲ್ಲಿ ಹಾವು ಪತ್ತೆ

Published 30 ಜೂನ್ 2024, 14:14 IST
Last Updated 30 ಜೂನ್ 2024, 14:14 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಜಗತ್ ವೃತ್ತ ಸಮೀಪದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರ ಸರ್ಕಾರಿ ನಿವಾಸದಲ್ಲಿ ಭಾನುವಾರ ಕೆರೆ ಹಾವೊಂದು ಕಾಣಿಸಿಕೊಂಡಿದೆ.

ಮನೆಯಲ್ಲಿ ಸುಮಾರು ಏಳು ಅಡಿ ಉದ್ದದ ಕೆರೆ ಹಾವು ಕಂಡು ಮನೆಯಲ್ಲಿ ಇದ್ದವರು ಗಾಬರಿಯಾದರು. ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಮನೆಯಲ್ಲಿದ್ದವರು ತಕ್ಷಣವೇ ಫೌಜಿಯಾ ತರನ್ನುಮ್ ಅವರ ಗಮನಕ್ಕೆ ತಂದರು.

ಏಕಾಏಕಿ ಹಾವನ್ನು ಕಂಡು ಗಾಬರಿಯಾದ ಫೌಜಿಯಾ ತರನ್ನುಮ್ ಅವರು, ಉರಗ ರಕ್ಷಕ ಪ್ರಶಾಂತ್‌ ಅವರನ್ನು ಮನೆಗೆ ಕರೆಯಿಸಿದರು. ಪ್ರಶಾಂತ್ ಅವರು ಕೆರೆ ಹಾವು ಹಿಡಿದು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT