ಕರ ವಸೂಲಿಗೆ ಪಿಒಸಿ ಮಷಿನ್ ಬಳಸದಿದ್ದರೆ ನೋಟಿಸ್: ಸಿಇಒ
‘ಕರ ವಸೂಲಿಗಾಗಿ ಎಲ್ಲ ಗ್ರಾಮ ಪಂಚಾಯಿತಿಗಳ ಬಿಲ್ ಕಲೆಕ್ಟರ್‌ಗಳಿಗೆ ಪಾಯಿಂಟ್ ಆಫ್ ಕೇರ್ (ಪಿಒಸಿ) ಮಷಿನ್‌ಗಳನ್ನು ನೀಡಲಾಗಿದೆ. ಪಿಒಸಿ ಬಳಸದವರಿಗೆ ನೋಟಿಸ್ ಕೊಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘10–15 ಬಿಲ್ ಕಲೆಕ್ಟರ್‌ಗಳು ಪಿಒಸಿ ಸರಿಯಿಲ್ಲ ಎಂದು ರಸೀದಿ ನೀಡಿದ್ದರು. ಅವರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ. ಕೆಲವು ಬಿಲ್ ಕಲೆಕ್ಟರ್‌ಗಳು ಕರ ಕಟ್ಟಿಸಿಕೊಂಡು ರಸೀದಿಯೂ ನೀಡಿ ಪಂಚಾಯಿತಿ ಖಾತೆಗೆ ಜಮೆ ಮಾಡುತ್ತಿಲ್ಲ. ಇದನ್ನು ನಿಯಂತ್ರಿಸಲು ಬೇರೆ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪಂಚತಂತ್ರ 2.0 (Panchatantra 2.0) ಸಿಸ್ಟಮ್ ಬರಲಿದ್ದು ಸಾರ್ವಜನಿಕರು ಎಲ್ಲಿಂದಾದರೂ ತೆರಿಗೆ ಕಟ್ಟಬಹುದು’ ಎಂದು ಮಾಹಿತಿ ನೀಡಿದರು.