ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ | ವೈಭವದಿಂದ ಜರುಗಿದ ಶ್ರೀ ರಾಮನವಮಿ

Published 17 ಏಪ್ರಿಲ್ 2024, 15:43 IST
Last Updated 17 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ಜೇವರ್ಗಿ: ಪಟ್ಟಣದ ಹೊರವಲಯದ ರಾಮಾಂಜನೇಯ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು.

ಬೆಳಿಗ್ಗೆ 7ಗಂಟೆಗೆ ಅಷ್ಠೋತ್ತರ, ಶ್ರೀರಾಮದೇವರಿಗೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ಅಪ್ಪಣ್ಣಗೌಡ ಪಾಟೀಲ ನೆರವೇರಿಸಿದರು.

ಬೆಳಿಗ್ಗೆ 9ಗಂಟೆಯಿಂದ ಸ್ಥಳೀಯ ಮಹಿಳೆಯರಿಂದ ಭಜನೆ ನಡೆಯಿತು. ಮಧ್ಯಾಹ್ನ ೧೨ ಗಂಟೆಗೆ ರಾಮದೇವರ ತೊಟ್ಟಿಲೋತ್ಸವ ವೈಭವದಿಂದ ಜರುಗಿತು. ನಂತರ ಸತ್ಯನಾರಾಯಣ ಪೂಜೆ, ನೈವೇದ್ಯ, ಮಹಾ ಮಂಗಳಾರುತಿ ಜರುಗಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಪ್ರ ಸಮಾಜದ ಅಧ್ಯಕ್ಷ ರಮೇಶಬಾಬು ವಕೀಲ, ಗುರುರಾಜ ಆಲಬಾಳ, ದತ್ತಾತ್ರೇಯರಾವ್ ಕೋಳಕೂರ, ರಾಘವೇಂದ್ರ ಆಲಬಾಳ, ಸುದರ್ಶನ್ ಆಲಬಾಳ, ಶಾಮರಾವ್ ಕುಲಕರ್ಣಿ, ಕಿಶನ್‌ರಾವ್‌ ಕುಲಕರ್ಣಿ, ದತ್ತಾತ್ರೇಯ ರೇವನೂರ, ವಿಜಯಕುಮಾರ ಕಲ್ಲೂರ, ಲಕ್ಷ್ಮಿಕಾಂತ ಹೋತಿನಮಡು, ರವೀಂದ್ರ ವಕೀಲ, ರಾಘವೇಂದ್ರ ಕುಲಕರ್ಣಿ, ಕಲ್ಲಯ್ಯಸ್ವಾಮೀ ಹಿರೇಮಠ, ಸುಧೀಂದ್ರ ವಕೀಲ, ಲಕ್ಷ್ಮಿ ಆಲಬಾಳ, ಜಮುನಾಬಾಯಿ ಕುಲಕರ್ಣಿ, ಅನೀತಾ ಆಲಬಾಳ, ವೀಣಾ ಆಲಬಾಳ, ವಿದ್ಯಾ ಜೋಶಿ, ಅನೀತಾ ವಕೀಲ, ಸುನೀತಾ ಆಲಬಾಳ, ಬಕುಲಾಬಾಯಿ ಹರವಾಳ, ಕವಿತಾ ಕುಲಕರ್ಣಿ, ಸರಸ್ವತಿ ಕುಲಕರ್ಣಿ, ಸವೀತಾ ಕುಲಕರ್ಣಿ, ವಿದ್ಯಾ ಪಾಟೀಲ, ಸೌಮ್ಯ ಕುಲಕರ್ಣಿ, ಪ್ರಿಯಾಂಕಾ ಕುಲಕರ್ಣಿ, ವಿಜಯಲಕ್ಷ್ಮಿ ಕುಲಕರ್ಣಿ ಸೇರಿದಂತೆ ಮಹಿಳೆಯರು ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT