ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ತೊಟ್ಟಿಲೋತ್ಸವ ಸಂಭ್ರಮ

ಬ್ರಾಹ್ಮಣ ಸಮಾಜದಿಂದ ರಾಮನವಮಿ ಆಚರಣೆ
Last Updated 13 ಏಪ್ರಿಲ್ 2019, 10:04 IST
ಅಕ್ಷರ ಗಾತ್ರ

ಚಿತ್ತಾಪುರ: ರಾಮ ನವಮಿ ನಿಮಿತ್ತ ಪಟ್ಟಣದ ರಾಮ ಮಂದಿರದಲ್ಲಿ ಶನಿವಾರ ಬ್ರಾಹ್ಮಣ ಸಮಾಜದಿಂದ ಶ್ರೀರಾಮನ ತೊಟ್ಟಿಲೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ಜರುಗಿತು.

ರಾಮ ಮಂದಿರಕ್ಕೆ ದೀಪಾಲಂಕಾರ ಮಾಡಲಾಗಿತ್ತು. ತೊಟ್ಟಿಲನ್ನು ವಿಶೇಷವಾಗಿ ಹೂವುಗಳಿಂದ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬ್ರಾಹ್ಮಣ ಸಮಾಜದ ಮಹಿಳಾ ಭಜನಾ ಮಂಡಳಿಯವರು ಜೋಗುಳ ಪದ ಹಾಡಿ ಸಂಭ್ರಮಿಸಿದರು.

ಬೆಳಿಗ್ಗೆಯಿಂದ ಮಂದಿರಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣರ ಮೂರ್ತಿಗಳಿಗೆ ಪೂಜೆ, ಆರಾದನೆ ಮತ್ತು ದರ್ಶನ ಕಾರ್ಯಕ್ರಮ ನಡೆಯಿತು. ಅರ್ಚಕರಾದ ರಾಜು ಭಟ್, ಪವನ ಜೋಶಿ, ಅರವಿಂದ ಸರಾಫ್, ಹಣಮಂತ ಆಚಾರ್ಯ, ರಾಘವೇಂದ್ರ ಡೋಣಗಾಂವ, ಪುಟ್ಟು ಜೋಶಿ ಅವರಿಂದ ವಿಶೇಷ ಪೂಜೆ, ಮಂಗಳಾರತಿ ಕಾರ್ಯಕ್ರಮ ಜರುಗಿತು.

ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಆದಿ ಶಂಕರಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ದೇವಿದಾಸ ಕುಲಕರ್ಣಿ, ಮುಖಂಡರಾದ ಸತ್ಯನಾರಾಯಣ ಬಜಾಜ್, ಸಂಜೀವ ಕುಲಕರ್ಣಿ, ಭೀಮರಾವ ಅಫಜಲಪುರಕರ, ಶ್ರೀಹರಿ ಭಟ್, ಸುಧಾಕರ್ ಹಣಿಕೇರಾ, ನರಹರಿ ಮೊಹರಿರ್, ವಿಶ್ವನಾಥ ಅಫಜಲಪುರಕರ, ದಿಗಂಬರಾವ್ ಕುಲಕರ್ಣಿ, ರಮೇಶ್ಚಂದ್ರ ದೇಶಮುಖ, ಅಂಬಾದಾಸ ತುರೆ, ತಮ್ಮಣ್ಣ, ಸೋನುಬಾಯಿ, ಸ್ವಪ್ನಾ ಪಾಟೀಲ್, ಸುಲಭ ಕುಲಕರ್ಣಿ, ಸರೋಜಾ ಅಫಜಲಪುರಕರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT