ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಂಟ್ ಮೇರಿ ಚರ್ಚ್‌ನಲ್ಲಿ ಕ್ರಿಸ್‌ಮಸ್‌ಗೆ ಚಾಲನೆ

Last Updated 18 ಡಿಸೆಂಬರ್ 2020, 2:04 IST
ಅಕ್ಷರ ಗಾತ್ರ

ಕಲಬುರ್ಗಿ: ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್‌ನೇತೃತ್ವದಲ್ಲಿ ನಗರದ ಸೇಂಟ್‌ ಮೇರಿಸ್ ಕೆಥೆಡ್ರಲ್‌ ಚರ್ಚ್‌ನಲ್ಲಿ ಡಿನಾಮಿನೇಷನ್ನಲ್ ಕ್ರಿಸ್‌ಮಸ್‌ ಆಚರಣೆಗೆ ಕಲಬುರ್ಗಿ ಧರ್ಮಕ್ಷೇತ್ರದ ಮುಖ್ಯಸ್ಥ ರಾಬರ್ಟ್‌ ಮೈಕೆಲ್ ಮಿರಾಂಡಾ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾವೆಲ್ಲರೂ ಐಕ್ಯದಿಂದ ಹಾಗೂ ಸಹೋದರತ್ವ ಭಾವನೆಯಿಂದ ಜೀವಿಸಬೇಕು. ಇದುವೇ ನಿಜವಾದ ಸೇವೆ. ಕ್ರಿಸ್‌ಮಸ್‌ ಹಬ್ಬದ ಸಂತೋಷ ಸಂಭ್ರಮ ಎಲ್ಲರ ಮನೆ ಮನೆಗಳಲ್ಲಿ ನೆಲೆಸಲಿ ಹಾಗೂ ದೇವರ ಆಶೀರ್ವಾದ ಸದಾಕಾಲ ಹೊಸವರ್ಷದಲ್ಲಿ ಇರಲಿ’ ಎಂದು ಪ್ರಾರ್ಥಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್ ಮಾತನಾಡಿ, ‘ನಾವೆಲ್ಲರೂ ಸಂಯಮ, ಪ್ರೀತಿ ಹಾಗೂ ಸೇವೆಯ ಮೌಲ್ಯಗಳಿಂದ ಏಸುಕ್ರಿಸ್ತರ ಜೀವನವನ್ನು ಅಳವಡಿಸಿಕೊಂಡು ಬಾಳಬೇಕು. ಅದೇ ನಿಜವಾದ ಕ್ರಿಸ್‌ಮಸ್‌ ಆಚರಣೆ’ ಎಂದರು.

ನಾಗನಹಳ್ಳಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಡಿ. ಕಿಶೋರ್ ಬಾಬು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ. ಕೂರ್ಮ ರಾವ್, ಕೆಕೆಆರ್‌ಡಿಬಿ ಜಂಟಿ ನಿರ್ದೇಶಕಿ ಪ್ರವೀಣಪ್ರಿಯಾ ಎನ್. ಡೇವಿಡ್, ಎಲ್ಲಾ ಚರ್ಚಿನ ಗುರುಗಳು ಹಾಗೂ ಫಾಸ್ಟರ್‌ಗಳು ಭಾಗವಹಿಸಿದ್ದರು.

ಫಾದರ್ ವಿನ್ಸೆಂಟ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT