ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಭಾಷ ಗುತ್ತೇದಾರ ಮೇಲೆ ₹3 ಕೋಟಿ ಸಾಲ!

Last Updated 19 ಏಪ್ರಿಲ್ 2023, 5:14 IST
ಅಕ್ಷರ ಗಾತ್ರ

ಕಲಬುರಗಿ: ಆಳಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಸುಭಾಷ ಗುತ್ತೇದಾರ ಅವರು ₹ 1.86 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ಅವರ ಪತ್ನಿ ಬಳಿ ₹27.70 ಲಕ್ಷ ಮೌಲ್ಯದ ಚರಾಸ್ತಿ ಇದೆ.

250 ಗ್ರಾಂ ಚಿನ್ನ ಹೊಂದಿದ್ದು, ಪತ್ನಿ ಹೆಸರಲ್ಲಿ ₹ 18.35 ಲಕ್ಷ ಮೌಲ್ಯದ ಸ್ಕೋಡ ಕಾರು ಇದೆ. ₹ 66,403 ಹಣ ಕೈಯಲ್ಲಿ ಇರಿಸಿಕೊಂಡಿದ್ದಾಗಿ ಚುನಾವಣೆ ಅಧಿಕಾರಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ತಮ್ಮ ಹೆಸರಿನಲ್ಲಿ ₹ 8.44 ಲಕ್ಷ ಮೌಲ್ಯದ ಕೃಷಿ ಜಮೀನು, ಪತ್ನಿ ಹೆಸರಲ್ಲಿ ₹ 1.59 ಕೋಟಿ ಮೌಲ್ಯದ ಬೆಲೆ ಬಾಳುವ ಕೃಷಿ ಜಮೀನು ಇದೆ. ₹64 ಲಕ್ಷ ಮೌಲ್ಯದ ಕೃಷಿಯೇತರ ಜಮೀನು ಹಾಗೂ ₹ 1.94 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ.

₹ 36 ಲಕ್ಷ ಮೌಲ್ಯದ ವಸತಿ ಹೊಂದಿದ್ದು, ಒಟ್ಟಾರೆ ಸ್ಥಿರ ಆಸ್ತಿಯ ಮೌಲ್ಯ ₹ 3.79 ಕೋಟಿಯಷ್ಟಿದೆ. ಪತ್ನಿ ಹೆಸರಲ್ಲಿ ₹ 1.59 ಕೋಟಿಯಷ್ಟಿದೆ. ವಿವಿಧ ಬ್ಯಾಂಕ್‌ಗಳಿಗೆ ಸುಭಾಷ ಅವರು ₹ 3 ಕೋಟಿ ಹಾಗೂ ಅವರ ಪತ್ನಿ ₹ 9 ಲಕ್ಷ ಸಾಲ ಕಟ್ಟಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT