ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲಬುರಗಿ ರಂಗಾಯಣದ ನಿರ್ದೇಶಕಿಯಾಗಿ ರಂಗಕರ್ಮಿ ಸುಜಾತಾ ಜಂಗಮಶೆಟ್ಟಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ದಶಕದ ಹಿಂದೆ ಆರಂಭವಾದ ಕಲಬುರಗಿ ರಂಗಾಯಣಕ್ಕೆ ಸುಜಾತಾ ಮೊದಲ ಮಹಿಳಾ ನಿರ್ದೇಶಕಿಯಾಗಿದ್ದಾರೆ.
ರಂಗಾಯಣ ಆಡಳಿತಾಧಿಕಾರಿ ಜಗದೇಶ್ವರಿ ನಾಶಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.