ಶುಕ್ರವಾರ, ಜನವರಿ 17, 2020
23 °C
6 ಕಿ.ಮೀ. ವರೆಗೂ ಹಬ್ಬಿದ ಮೆರವಣಿಗೆ

ಪೌರತ್ವ ಕಾಯ್ದೆ ತಿದ್ದುಪಡಿ ಬೆಂಬಲಿಸಿ ಕಲಬುರ್ಗಿಯಲ್ಲಿ ಬೃಹತ್ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕಲಬುರ್ಗಿಯಲ್ಲಿ ಬೃಹತ್ ಮೆರವಣಿಗೆ ನಡೆದಿದ್ದು, ಸಾಗರೋಪಾದಿಯಲ್ಲಿ ಜನರು ಸೇರಿದ್ದಾರೆ. 

ನಗರದ ಜಗತ್ ವೃತ್ತದಿಂದ ಆರಂಭವಾಗಿ ಹುಮನಾಬಾದ್ ಬೇಸ್ ವರೆಗೂ ಸುಮಾರು 6 ಕಿ.ಮೀ ಊದ್ದಕ್ಕೂ ಜನ ಸೇರಿದ್ದಾರೆ. ಪ್ರತಿಯೊಬ್ಬರ ಕೈಯಲ್ಲೂ ರಾಷ್ಟ್ರಧ್ವಜ, ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರ ಭಾವಚಿತ್ರದ ಪ್ಲಕ್‌ಕಾರ್ಡ್ ಹಿಡಿದು ಪ್ರದರ್ಶಿಸುತ್ತಿದ್ದಾರೆ. 

ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಮೂಹ 2 ಕಿ.ಮೀ ಉದ್ದದ ಬೃಹತ್ ರಾಷ್ಟ್ರಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು. 

ಮೆರವಣಿಗೆ ಉದ್ದಕ್ಕೂ ಭಾರತ ಮಾತಾ ಕಿ ಜೈ, ವಂದೇ ಮಾತರಂ,..ಘೋಷಣೆ ಕೂಗುತ್ತಿದ್ದಾರೆ. ‌ಡೊಳ್ಳು ಕುಣಿತ, ಜಾಂಜ್ ಪಥಕ್, ಕಹಳೆ ತಂಡಗಳೂ ಸದ್ದು ಮಾಡುತ್ತಿವೆ.

ಕೆಲ ಕಂಪನಿಗಳು ಅಲ್ಲಲ್ಲಿ ಕುಡಿಯುವ ನೀರಿನ ಪಾಕೇಟ್, ತಂಪು ಪಾನೀಯ ವ್ಯವಸ್ಥೆ ಮಾಡಿವೆ. ಕೆಎಸ್ಆರ್‌ಪಿ, ಸಿವಿಲ್ ಪೊಲೀಸ್ ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡಲು ಸನ್ನದ್ಧರಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು