ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಧನೆಗಿಂತ ಸಂಸ್ಕಾರ ದೊಡ್ಡದು’

Last Updated 11 ಸೆಪ್ಟೆಂಬರ್ 2021, 12:27 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಾಧನೆಗಿಂತ ಸಂಸ್ಕಾರ ದೊಡ್ಡದು. ಆದರೆ, ಆದುನಿಕ ಪ್ರಪಂಚದಲ್ಲಿ ಮನುಷ್ಯರು ಎಷ್ಟೇ ಸಾಧನೆ ಮಾಡಿದರೂ ಸಾಮಾಜಿಕ ಸಂಸ್ಕಾರ ಮೂಡಿಸುವಲ್ಲಿ ವಿಫಲವಾಗಿದ್ದೇವೆ. ಮೌಲ್ಯಯುತ ಶಿಕ್ಷಣದ ಕೊರತೆಯೇ ಇದಕ್ಕೆ ಕಾರಣ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಪಕ ಡಾ.ರಮೇಶ ಲಂಡನಕರ್‌ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಬರಹಗಾರರ ಬಳಗದ ಜಿಲ್ಲಾ ಘಟಕದ ಉದ್ಘಾಟನೆ, ಪುಸ್ತಕ ಲೋಕಾರ್ಪಣೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ‘ಶಿಕ್ಷಕ ಸಾಹಿತಿ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದ ಅವರು,‘ನಾವು ಮಾಡುವ ಕೆಲಸ ಇತರರಿಗೆ ಮಾದರಿ ಆಗಬೇಕು. ಮಕ್ಕಳಿಗೆ ಸಂಸ್ಕಾರ ನೀಡುವಂಥ ಶಿಕ್ಷಣ ಕೊಡಬೇಕಾಗಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ‘ಸಾಹಿತ್ಯ ಸಮಾಜದ ಪ್ರಗತಿಗೆ ಪೂರಕವಾಗಿರಬೇಕು. ಕನ್ನಡಿಯಾಗಿ ಜನ ಸಾಮಾನ್ಯರ ಮಧ್ಯೆ ನಿಂತು ಉಸಿರಾಗಬೇಕು. ಶಿಕ್ಷಕರು ಮೌಲ್ಯಗಳನ್ನು ಅಳವಡಿಸಿಕೊಂಡು ಮಾದರಿ ವ್ಯಕ್ತಿಯಾಗಿ ಬೆಳೆಯಬೇಕು. ಅವರಿಂದ ಮಕ್ಕಳೂ ಉತ್ತಮ ನಾಗರಿಕರಾಗುತ್ತಾರೆ’ ಎಂದರು.

ಕನಾಟಕ ರಾಜ್ಯ ಬರಹಗಾರರ ಬಳಗದ ಅಧ್ಯಕ್ಷ ಮಧು ಎಲ್. ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕಿ ಚಂದ್ರಕಲಾ ಪಾಟೀಲ ಅವರು ಬರೆದ ‘ನಲಿ ಕಲಿ’ ಕವನ ಸಂಕಲನವನ್ನು ಎ.ಕೆ.ರಾಮೇಶ್ವರ ಲೋಕಾರ್ಪಣೆ ಮಾಡಿದರು. ಸಾಹಿತಿ ಧರ್ಮಣ್ಣ ಎಚ್. ಧನ್ನಿ ಕೃತಿ ಪರಿಚಯ ಮಾಡಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೇವಾಡ, ಈ ಭಾಗದ ಎಲ್ಲಾ ಲೇಖಕರ ಕೃತಿಗಳನ್ನು ಪುಸ್ತಕ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಬಳಗದ ಉಪಾಧ್ಯಕ್ಷ ಬಾರಾವಲಿ ಬಾವಿಹಳ್ಳಿ, ಖಂಡೂ ಬಂಜಾರ, ಸಾಹಿತಿ ಮಂಗಲಾ ಕಪರೆ, ಚಂದ್ರಕಲಾ ಪಾಟೀಲ, ರವಿಕುಮಾರ ನಂದಗೇರಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಎನ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಶಾಳ ಮಠದ ಕೇದಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವನ್ಯಾ ಶಿವರಾಜ ಗೊಬ್ಬೂರ ಭರತನಾಟ್ಯ ಪ್ರದರ್ಶನ ನೀಡಿದರು. ಸಿದ್ಧಾರೂಢ ನಾಗರಳ್ಳಿ ಪ್ರಾರ್ಥನೆ ಗೀತೆ ಹಾಡಿದರು. ಶಿವಲೀಲಾ ಎಸ್.ಕೆ. ನಿರೂಪಿಸಿದರು. ಬಾಬುಮಿಯಾ ಫೂಲಾರಿ ಸ್ವಾಗತಿಸಿದರು. ಗಂಗಮ್ಮ ನಾಲವಾರ ವಂದಿಸಿದರು.

ಪ್ರಶಸ್ತಿ ಪುರಸ್ಕತರು: ಡಾ.ಶೋಭಾದೇವಿ ಚೆಕಕ್ಕಿ, ಸಿದ್ದಣ್ಣ ಗೋಡೆಕರ್, ಪ್ರಕಾಶ ಕೋಟ್ರೆ, ಸಿಂಧುಮತಿ ಭೋಸ್ಲೆ, ಮಹಾನಂದ ಸಿಬಶೆಟ್ಟಿ, ಬಾಹುಬಲಿ ಮಾಲಗತ್ತಿ, ಸುಕೇಶಿನಿ, ಸುನೀತಾ ಮಾಳಗೆ, ಝಾಪರ್ ಅಲಿ ಮಿರಾನ, ಮಹಾದೇವ ಕೊತಲಿ, ನೇತ್ರಾವತಿ ರಾಂಪೂರ ಹಾಗೂ ರಾಜೇಶ ನಾಗೂರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT