ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಪ್ರೊ.ಬಸವರಾಜ ಸಣ್ಣಕ್ಕಿ

7

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಪ್ರೊ.ಬಸವರಾಜ ಸಣ್ಣಕ್ಕಿ

Published:
Updated:
Deccan Herald

ಕಲಬುರ್ಗಿ: ‘ನಯ, ವಿನಯ ಎಲ್ಲಿ ಇರುವುದಿಲ್ಲವೋ ಅಲ್ಲಿ ಸುಸಂಸ್ಕೃತ ವಿದ್ಯಾರ್ಥಿಗಳು ಹೊರಬರಲು ಸಾಧ್ಯವಿಲ್ಲ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧ ಬಹಳ ಅಮೂಲ್ಯವಾದದ್ದು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಸಣ್ಣಕ್ಕಿ ಹೇಳಿದರು.

ನಗರದ ಮಾನ್ಯವಾರ್ ದಾದಾಸಾಹೇಬ್ ಕಾನ್ಶೀರಾಮ್ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಷ್ಟಪಟ್ಟು ಅಭ್ಯಾಸ ಮಾಡುವವರಿಗೆ ಯಶಸ್ಸು ಲಭಿಸುತ್ತದೆ. ವಿದ್ಯಾರ್ಥಿಗಳು ಉನ್ನತ ಗುರಿ ತಲುಪಲು ನಿರಂತರ ಅಧ್ಯಯನ ಕೈಗೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಪ್ರಾಧ್ಯಾಪಕ ಡಾ. ವಿ.ಟಿ.ಕಾಂಬಳೆ ಮಾತನಾಡಿ, ‘ಒಂದು ಗಿಡ ಬೆಳೆಯಲು ಬೀಜ, ಗೊಬ್ಬರ, ನೀರು, ಉತ್ತಮ ವಾತಾವರಣ ಬೇಕು. ಹಾಗೆಯೇ ಒಬ್ಬ ವಿದ್ಯಾರ್ಥಿಗೆ ಓದಲು ಒಳ್ಳೆಯ ವಾತಾವರಣ, ಪಾಲಕರ ಪ್ರೀತಿ, ಶಿಕ್ಷಕರ ಸಹಕಾರ, ಒಳ್ಳೆಯ ಗೆಳೆತನ ಅಗತ್ಯವಾಗಿದೆ’ ಎಂದು ಹೇಳಿದರು.

ಪ್ರಾಂಶುಪಾಲರಾದ ಸುನೀತಾ ಕಾಂಬಳೆ, ಕಾಲೇಜಿನ ಆಡಳಿತಾಧಿಕಾರಿ ನವರಂಗ, ಜೆ.ಎಂ.ಸೋನಕಾಂಬಳೆ, ಡಾ. ರಾಜಕುಮಾರ ದಣ್ಣೂರ, ಭಾಗ್ಯಶ್ರೀ ದೊಡ್ಮನಿ, ಚಂದ್ರಶೇಖರ, ಸುಧಾರಾಣಿ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !