ಟೆನ್ನಿಸ್: ಪಿಡಿಎಗೆ ದ್ವಿತೀಯ ಸ್ಥಾನ

7

ಟೆನ್ನಿಸ್: ಪಿಡಿಎಗೆ ದ್ವಿತೀಯ ಸ್ಥಾನ

Published:
Updated:

ಕಲಬುರ್ಗಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು ನಗರದ ಶೆಟ್ಟಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಿದ್ದ ವಲಯ ಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದು, ಅಂತರ ವಲಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಶ್ರೀಶೈಲ್, ಸಚಿನ್ ಸಾಗರ, ಶಾಶ್ವತ್, ಅಭಿಷೇಕ, ಪ್ರಣವ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಬೆಳಗಾವಿಯ ಸಪ್ತಗಿರಿ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಸೆ.6 ಮತ್ತು 7ರಂದು ಅಂತರ ವಲಯ ಮಟ್ಟದ ಸ್ಪರ್ಧೆಗಳು ಜರುಗಲಿವೆ.

ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲ ಡಾ. ಎಸ್.ಎಸ್.ಆವಂತಿ, ಶೈಕ್ಷಣಿಕ ಡೀನ್ ಡಾ. ಎಸ್.ಆರ್.ಪಾಟೀಲ, ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಶರಣಬಸಪ್ಪ ಆರ್.ಟಿ., ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಸುರೇಶ ಜಿ.ಪಾಟೀಲ, ಪ್ರೊ.ಸೀತಾರಾಮ ಮುನ್ನೂರ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ವಿಶ್ವನಾಥ ದೇವರಮನಿ ಅಭಿನಂದನೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !