ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆರ್ರಾಕೊಟಾ ಕಾರ್ಯಾಗಾರ ನಾಳೆಯಿಂದ

Last Updated 25 ಸೆಪ್ಟೆಂಬರ್ 2021, 6:49 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ‘ವರ್ಣಿಕಾ’ ಸಮಕಾಲೀನ ಮಹಿಳಾ ಕಲಾವಿದರ ಸಂಸ್ಥೆಯ ವತಿಯಿಂದ ಸೆ. 26ರಿಂದ 30ರವರೆಗೆ ‘ಮಹಿಳಾ ಕಲಾವಿದರ ಟೆರ್ರಾಕೊಟಾ ಕಾರ್ಯಾಗಾರ’ ಆಯೋಜಿಸಲಾಗಿದೆ.

ನಗರದ ಟ್ಯಾಂಕ್‌ಬಂಡ್‌ ರಸ್ತೆಯಲ್ಲಿರುವ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್‌ ಗ್ಯಾಲರಿಯಲ್ಲಿ ಸೆ. 26ರಂದು ಬೆಳಿಗ್ಗೆ 11ಕ್ಕೆ ಕಾರ್ಯಾಗಾರದ ಉದ್ಘಾಟನೆ ಸಮಾರಂಭ ನಡೆಯಲಿದೆ. ಹಿರಿಯ ಕಲಾವಿದ ವಿ.ಜಿ. ಅಂದಾನಿ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಎಚ್‌.ವಿ. ಮಂತಳ್ಳಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ನಟರಾಜ ಎಂ.ಶಿಲ್ಪಿ ಆಗಮಿಸುವರು. ವರ್ಣಿಕಾ ಸಂಸ್ಥೆ ಅಧ್ಯಕ್ಷೆ ಮಹಾಂತೇಶ್ವರಿ ಎ. ಕಂಠಿ ಅಧ್ಯಕ್ಷತೆ ವಹಿಸುವರು.

ಕಲಾವಿದೆ ಮೇಘಾ ಮಂಜುನಾಥ ಅವರು ಐದು ನದಿನಗಳ ಶಿಬಿರದಲ್ಲಿ ತರಬೇತಿ ನೀಡಲಿದ್ದಾರೆ. ಜೇಡಿಮಣ್ಣಿನ ವಿವಿಧ ಶಿಲ್ಪಕಲಾಕೃತಿಗಳು, ಮೂರ್ತಿಗಳು, ಸಾಂಪ್ರದಾಯಿಕ ಮಡಕೆಗಳು, ಆಲಂಕಾರಿಕ ವಸ್ತುಗಳು, ವಿವಿಧ ನಮೂನೆಯ ಆಭರಣಗಳು ಸೇರಿದಂತೆ ವೈವಿಧ್ಯಮಯ ವಸ್ತುಗಳನ್ನು ತಯಾರಿಸುವ ಮಾರ್ಗದರ್ಶನ ಮಾಡಲಾಗುವುದು. ಇದಕ್ಕಾಗಿ ಬೆಂಗಳೂರಿನಿಂದ ಜೇಡಿಮಣ್ಣು ಕೂಡ ತರಿಸಲಾಗಿದ್ದು, ಮಣ್ಣು ಹದ ಮಾಡುವುದರಿಂದ ಹಿಡಿದು ಆಭರಣ ಸಿದ್ಧಪಡಿಸುವವರೆಗೆ ಎಲ್ಲವನ್ನೂ ಪ್ರಾಯೋಗಿಕವಾಗಿ ಹೇಳಿಕೊಡಲಾಗುವುದು. ಐದು ದಿನಗಳವರೆಗೆ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಕೂಡ ಇರಲಿದೆ ಎಂದುಮಹಾಂತೇಶ್ವರಿ ಎ. ಕಂಠಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಮೊ. 8310536458, 8073239461 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT