ಭಾನುವಾರ, ಸೆಪ್ಟೆಂಬರ್ 19, 2021
30 °C

ಎರಡು ಬೈಕ್ ಮಧ್ಯೆ ಡಿಕ್ಕಿ: ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ (ಕಲಬುರ್ಗಿ ಜಿಲ್ಲೆ): ಬೈಕ್‌ಗಳ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ಸವಾರರು ಮೃತಪಟ್ಟ ಘಟನೆ ತಾಲ್ಲೂಕಿನ ಮಡಕಿ ತಾಂಡಾ ಬಳಿ ಗಣೇಶ ಹಬ್ಬದ ಮುನ್ನಾ ದಿನವಾದ ಗುರುವಾರ ನಡೆದಿದೆ.

ಲಾಡಮುಗಳಿ ಗ್ರಾಮದ ಅಂಬರೀಶ ಅಶೋಕ ಛತ್ರಿ (24) ಅನೀಲ (ಪಿಂಟು) ಮಲ್ಲಯ್ಯ ಗುತ್ತೇದಾರ (26) ಹಾಗೂ ಕಲಬುರ್ಗಿ ಸಮೀಪದ ಬೇಲೂರ ಕ್ರಾಸ್ ನಿವಾಸಿ ನಾಗೇಶ ಅಣ್ಣಪ್ಪ ವಡ್ಡರ (24) ಮೃತಪಟ್ಟಿದ್ದಾರೆ. ಇದೇ ಗ್ರಾಮದ ನಾಗೇಶ ಮುಕುಂದ (28) ತೀವ್ರಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಮಹಾಗಾಂವ ಕ್ರಾಸ್‌ಗೆ ತೆರಳಿದ್ದ ಅಂಬರೀಶ ಹಾಗೂ ಅನೀಲ ಬೈಕ್ ಮೂಲಕ ಸ್ವಗ್ರಾಮ ಲಾಡ ಮುಗಳಿಗೆ ಮರಳುತ್ತಿದ್ದರು.
ವಿ.ಕೆ. ಸಲಗರಗೆ ತೆರಳಿದ್ದ ಬೇಲೂರ ಕ್ರಾಸ್ ನಿವಾಸಿಗಳಾದ ನಾಗೇಶ ವಡ್ಡರ ಹಾಗೂ ನಾಗೇಶ ಮುಕುಂದ ಬೇಲೂರ ಕ್ರಾಸ್ ಗೆ ಮರಳುತ್ತಿದ್ದರು. ಮಧ್ಯೆ ಮಡಕಿ ತಾಂಡಾ ಬಳಿ ಡಿಕ್ಕಿ ಸಂಭವಿಸಿದೆ.

ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.