ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್: ಲಾಠಿ ಹಿಡಿದ ಮೂವರು ಪ್ರಾಧ್ಯಾಪಕರು

Last Updated 6 ಜನವರಿ 2023, 20:01 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಮೂವರು ಸಹಾಯಕ ಪ್ರಾಧ್ಯಾಪಕರು ಲಾಠಿ ಹಿಡಿದು ಆರ್‌ಎಸ್‌ಎಸ್ ಗಣವೇಷಧಾರಿಗಳಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿದ್ಯಾರ್ಥಿಯೊಬ್ಬರ ಜತೆ ಸಹಾಯಕ ಪ್ರಾಧ್ಯಾಪಕರಾದ ಸಾರ್ವಜನಿಕ ಆಡಳಿತ ವಿಭಾಗದ ಡಾ.ಅಲೋಕ್ ಕುಮಾರ್ ಗೌರವ್‌, ಮನಃಶಾಸ್ತ್ರದ ವಿಭಾಗದ ಡಾ.ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ.ರಾಕೇಶ್ ಕುಮಾರ್ ಅವರು ಸೆಲ್ಫಿ ಚಿತ್ರ ಕ್ಲಿಕ್ಕಿಸಿಕೊಂಡ ಚಿತ್ರ ವೈರಲ್‌ ಆಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಈಚೆಗೆ ನಡೆದ ಆರ್‌ಎಸ್‌ಎಸ್‌ ಪಥಸಂಚಲನದ ವೇಳೆ ಕ್ಲಿಕ್ಕಿಸಿದ ಚಿತ್ರ ಎನ್ನಲಾಗುತ್ತಿದೆ.

'ವಿಶ್ವವಿದ್ಯಾಲಯದ ಗಮನಕ್ಕೆ ತಾರದೇ ಬೋಧನೆ ಮತ್ತು ಸಂಶೋಧನೆಗೆ ಹೊರತುಪಡಿಸಿ ಇತರೆ ಚಟುವಟಿಕೆಗಳಲ್ಲಿ ಬೋಧಕ ವರ್ಗವು ತೊಡಗಬಾರದು ಮತ್ತು ವಿಶ್ವವಿದ್ಯಾಲಯದ ನೌಕರರು ಯಾವ ಸಂಘಟನೆ ಜೊತೆ ಗುರುತಿಸಿಕೊಳ್ಳಬಾರದು ಎಂಬ ನಿಯಮವಿದೆ’ ಎಂದು ಸಿಯುಕೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ
ತಿಳಿಸಿದರು.

‘ಇಲ್ಲಿನ ಅಧ್ಯಾಪಕರು ಬೋಧನೆಗೆ ಮಾತ್ರ ಸೀಮಿತರಾಗಬೇಕು. ಬೇರೆ ಚಟುವಟಿಕೆ ನಡೆಸಬಾರದು. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಆರ್‌ಎಸ್‌ಎಸ್‌ ಗಣವೇಷಧಾರಿಗಳಾಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸುವೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜ ಡೋಣುರ ‘ಪ್ರಜಾವಾಣಿ’ಗೆ
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT