ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ತೊಗರಿ ಖರೀದಿ ಕೇಂದ್ರ ಆರಂಭ

₹ 6300 ಬೆಂಬಲ ಬೆಲೆ ನಿಗದಿ, ಜಿಲ್ಲೆಯಲ್ಲಿ 184 ಖರೀದಿ ಕೇಂದ್ರಗಳ ಆರಂಭ
Last Updated 14 ಡಿಸೆಂಬರ್ 2021, 3:51 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಸಕ್ತ ಸಾಲಿನಲ್ಲಿ ತೊಗರಿಕಾಳು ಖರೀದಿಸಲು ಜಿಲ್ಲೆಯಲ್ಲಿ 184 ಖರೀದಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಡಿ.15ರಿಂದ ಎಲ್ಲ ಕೇಂದ್ರಗಳು ಖರೀದಿ ಆರಂಭಿಸಲಿವೆ. ಪರಿಷ್ಕೃತ ಆದೇಶದ ಪ್ರಕಾರ, ಪ್ರತಿ ಕ್ವಿಂಟಲ್‌ಗೆ ₹ 6300 ಬೆಂಬಲ ಬೆಲೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಇದಕ್ಕೆ ಡಿ. 15ರಿಂದಲೇ ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಕೂಡ ಆರಂಭವಾಗಲಿದೆ. ನೋಂದಣಿಗೆ 45 ದಿನ ಹಾಗೂ ಖರೀದಿಗೆ 90 ದಿನ ಅವಕಾಶ ಇರುತ್ತದೆ. ಪ್ರತಿ ಎಕರೆಗೆ 7.5 ಎಕರೆಯಂತೆ ಪ್ರತಿ ರೈತನಿಂದ ಗರಿಷ್ಠ 15 ಕ್ವಿಂಟಲ್‌ ತೊಗರಿಕಾಳು ಖರೀದಿಸಲಾಗುವುದು. ಈ ಖರೀದಿ ಕೇಂದ್ರಗಳು ಎಲ್ಲ ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಇವೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ತೊಗರಿ ನೀಡಬೇಕು.

ನೋಂದಣಿಗಾಗಿ ಎನ್‍.ಐ.ಸಿ ಸಂಸ್ಥೆಯು ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶವನ್ನು ಈಗಾಗಲೇ ‘ಫ್ರುಟ್ಸ್‌’ ದತ್ತಾಂಶದಲ್ಲಿ ಸೇರಿಸಿ, ಬೆಳೆ ಸಮೀಕ್ಷೆಯ ತಾಳೆ ಮಾಡಿ ವಿವರಗಳನ್ನು ಸೇರಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದ ನಂತರ ಎನ್‍.ಐ.ಸಿ ತಂತ್ರಾಂಶದಿಂದ ‘ನಾಫೆಡ್’ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿಯನ್ನು ಒದಗಿಸಲಾಗುವುದು. ತಂತ್ರಾಂಶದಲ್ಲಿ ಈ ಮಾಹಿತಿ ಬಳಸಿ ರೈತರಿಂದ ತೊಗರಿಕಾಳು ಖರೀದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT