ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯಲಿರುವ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ ಕನ್ನಡ ಭವನದ ಬಾವುಗೌಡ ದರ್ಶನಾಪುರ ರಂಗಮಂದಿರ ಸಜ್ಜುಗೊಂಡಿದೆ.

ಒಟ್ಟು ಆರು ಗೋಷ್ಠಿಗಳಲ್ಲಿ ಚಿಂತನ–ಮಂಥನ ನಡೆಯಲಿದೆ. ಸೋಮವಾರ ಬೆಳಿಗ್ಗೆ 8.15ಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನಾಡ ಧ್ವಜಾರೋಹಣ ಹಾಗೂ ಕಸಾಪ ಕಲಬುರಗಿ ತಾಲ್ಲೂಕು ಅಧ್ಯಕ್ಷೆ ಶಿವಲೀಲಾ ಕಲಗುರ್ಕಿ ಪರಿಷತ್ ಧ್ವಜಾರೋಹಣ ನೆರವೇರಿಸುವರು.

ಬೆಳಿಗ್ಗೆ 9.30ಕ್ಕೆ ಕಲಬುರಗಿ ಜಿಲ್ಲಾಡಳಿತದ ಭವನದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ಕನ್ನಡ ಭವನವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮೇಯರ್ ವರ್ಷಾ ಜಾನೆ ಚಾಲನೆ ನೀಡುವರು. ಪಾಲಿಕೆ ವಿರೋಧ ಪಕ್ಷದ ನಾಯಕಿ ಶೋಭಾ ದೇಸಾಯಿ, ತಹಶೀಲ್ದಾರ್ ಆನಂದಶೀಲ ಪಾಲ್ಗೊಳ್ಳುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಮೆರವಣಿಗೆ ನೇತೃತ್ವ ವಹಿಸುವರು.

ಬೆಳಿಗ್ಗೆ 11.15 ಗಂಟೆಗೆ ಲಿಂ.ಶರಣಬಸವಪ್ಪ ಅಪ್ಪ ವೇದಿಕೆಯಲ್ಲಿ ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್ ಸಮ್ಮೇಳನ ಉದ್ಘಾಟಿಸುವರು. ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಸಮ್ಮೇಳನದ ಅಧ್ಯಕ್ಷ ಮುಡಬಿ ಗುಂಡೇರಾವ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ, ಶರಣ ಬಸವ ವಿವಿ ಕುಲಾಧಿಪತಿ ದಾಕ್ಷಾಯಣಿ ಎಸ್. ಅಪ್ಪ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಪೊಲೀಸ್ ಅಧಿಕಾರಿ, ಜಾನಪದ ವಿದ್ವಾಂಸ ಜ್ಯೋತಿರ್ಲಿಂಗ ಹೊನಕಟ್ಟಿ ‘ಗುಲಾಬಿ ಗಂಧ’ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

ಸಚಿವ ಡಾ.ಶರಣಪ್ರಕಾಶ ಪಾಟೀಲ, ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಸೇರಿದಂತೆ ಹಲವರು ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

ಸಮ್ಮೇಳನದ ಗೋಷ್ಠಿಗಳು...

ಗೋಷ್ಠಿ–1; ಕಲ್ಲರಳಿ ಹೂವಾಗಿ: ಅಧ್ಯಕ್ಷತೆ–ಸ್ವಾಮಿರಾವ ಕುಲಕರ್ಣಿ. ಕಲಬುರಗಿ ಜಿಲ್ಲಾ ಸಾಂಸ್ಕೃತಿಕ ಪರಂಪರೆ ಕುರಿತು ಕಲ್ಯಾಣ ರಾವ ಪಾಟೀಲ ಉಪನ್ಯಾಸ. ಕಲಬುರಗಿ ಜಿಲ್ಲಾ ಸಾಹಿತ್ಯಿಕ ನೋಟ ಕುರಿತು ಶ್ರೀಶೈಲ ನಾಗರಾಳ ವಿಚಾರ ಮಂಡನೆ. ಮಧ್ಯಾಹ್ನ 1.15

ಗೋಷ್ಠಿ–2; ಮಾತೆಂಬುದು ಜೋತಿರ್ಲಿಂಗ: ಅಧ್ಯಕ್ಷತೆ–ಶಾರದಾದೇವಿ ಜಾಧವ. ಕೀರ್ತನ ಮತ್ತು ತತ್ವಪದಾವಲೋಕನ ಕುರಿತು ಜಗನ್ನಾಥ ತರನಳ್ಳಿ ವಿಚಾರ ಮಂಡನೆ. ವಚನ ದರ್ಶನ ಮತ್ತು ಭಾರತ ಸಂವಿಧಾನ ಕುರಿತು ಪ್ರೊ.ಸಂಜಯ್ ಮಾಕಲ್ ಉಪನ್ಯಾಸ. ಮಧ್ಯಾಹ್ನ 3.15 ಗೋಷ್ಠಿ–3; ಕಾವ್ಯಧೇನು ಕವಿಗೋಷ್ಠಿ: ಅಧ್ಯಕ್ಷತೆ–ಸದಾನಂದ ಪೆರ್ಲ. ಆಶಯ ನುಡಿ–ಸದಾನಂದ ಹೇಮನೂರ. ವಿಶೇಷ ಅತಿಥಿ–ಅಯಾಜುದ್ದೀನ್ ಪಟೇಲ್. ವಿವಿಧ ಕವಿಗಳಿಂದ ಕವನ ವಾಚನ. ಸಂಜೆ 4.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.