ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿ ನಾಳೆಯಿಂದ

16 ವರ್ಷದೊಗಳಗಿನವರ ಜಿಲ್ಲಾ ಕ್ರಿಕೆಟ್‌ ತಂಡದ ಆಯ್ಕೆ ಪ್ರಕ್ರಿಯೆ; 85 ಮಂದಿ ಭಾಗಿ
Last Updated 2 ಆಗಸ್ಟ್ 2022, 2:01 IST
ಅಕ್ಷರ ಗಾತ್ರ

ಕಲಬರುಗಿ:ಆಗಸ್ಟ್‌3ರಿಂದ16 ವರ್ಷ
ದೊಳಗಿನವರಅಂತರ ಜಿಲ್ಲಾಕ್ರಿಕೆಟ್‌ ಟೂರ್ನಿ ಆರಂಭವಾಗಲಿದೆ.

ರಾಯಚೂರು ವಲಯದ ಪಂದ್ಯಗಳು ರಾಯಚೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿವೆ.

ಈ ಸಂಬಂಧ ಜಿಲ್ಲಾ ಕ್ರಿಕೆಟ್‌ ತಂಡದ ರಚನೆಗೆ ಕ್ರಿಕೆಟ್‌ ಪ್ರತಿಭೆಗಳ ಮುಕ್ತ ಆಯ್ಕೆ ಪ್ರಕ್ರಿಯೆ ನಡೆಯಿತು.

ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯುತ್ತಿದ್ದ ತಂಡದ ಆಯ್ಕೆ ಪ್ರಕ್ರಿಯೆ ಈ ಬಾರಿ ಜುಲೈ ಕೊನೆ ವಾರದಲ್ಲೇ ಪೂರ್ಣಗೊಂಡಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ನಗರ ಸೇರಿ ಹಲವು ತಾಲ್ಲೂಕುಗಳಿಂದ 85ಕ್ಕೂ ಹೆಚ್ಚು ಕಿರಿಯ ಕ್ರಿಕೆಟ್ ಪಟುಗಳು ಪಾಲ್ಗೊಂಡಿದ್ದರು. ಇಲ್ಲಿ ಆಯ್ಕೆಯಾದ 15 ಮಂದಿಗೆ ಜಿಲ್ಲಾ ತಂಡದಲ್ಲಿ ಸ್ಥಾನ ದೊರೆಯುತ್ತದೆ. ಸ್ಥಾನ ಪಡೆದ 15 ಮಂದಿಗೂ ಮೂರು ದಿನಗಳ ಶಿಬಿರ ಏರ್ಪಡಿಸಿ, ವಿಶೇಷ ತರಬೇತಿ ನೀಡಲಾಗುತ್ತದೆ.

‘ಜಿಲ್ಲೆಯ ಚಿಂಚೋಳಿ, ಆಳಂದ, ಶಹಬಾದ್, ಮಳಖೇಡದಿಂದ ಹೆಚ್ಚಿನ ಕ್ರಿಕೆಟ್‌ಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚಿಂಚೋಳಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಟೆನ್ನಿಸ್‌ ಬಾಲ್‌ನಲ್ಲಿ ಅಭ್ಯಾಸ ಮಾಡಿದ್ದರು. ವಿದ್ಯಾರ್ಥಿಗಳಿಗೆ ನಾವೇ ಶೂ ಮತ್ತು ಅಗತ್ಯ ಪರಿಕರ ನೀಡಿ, ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟೆವು’ ಎಂದು ರಾಯಚೂರು ವಲಯದ
ಮುಖ್ಯಸ್ಥ ಡಾ. ರಾಜು ಕುಳಗೇರಿ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6 ವಲಯ ತಂಡಗಳಿದ್ದು, ಅದರಲ್ಲಿ ರಾಯಚೂರು ವಲಯವೂ ಒಂದು. ಈ ವಲಯದಲ್ಲಿ ಒಟ್ಟು 7 ಜಿಲ್ಲಾ ತಂಡಗಳಿದ್ದು, ಗುಲ್ಬರ್ಗಾ ಎ ಮತ್ತು ಬಿ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಆಗಸ್ಟ್ 3ರಿಂದ 25ರವರೆಗೆ ಅಂತರ ಜಿಲ್ಲಾ ಪಂದ್ಯಗಳು ನಡೆಯಲಿದೆ. ಈ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ವಲಯ
ತಂಡಕ್ಕೆ ಆಯ್ಕೆ ಮಾಡಲಾಗುವುದು. ಜೊತೆಗೆ ಅವರಿಗೆ ಉಚಿತ ಟೂಲ್‌ ಕಿಟ್‌, ಊಟ, ವಸತಿ ಹಾಗೂ ದಿನಭತ್ಯೆ ಸೇರಿ ವಿವಿಧ ಸೌಲಭ್ಯ
ಕೊಡಲಾಗುವುದು’ ಎಂದು ಅವರು ವಿವರಿಸಿದರು.

ರಾಜ್ಯದ 6 ಕ್ರಿಕೆಟ್‌ ವಲಯ ತಂಡಗಳು

ಬೆಂಗಳೂರು, ತುಮಕೂರು, ಶಿವಮೊಗ್ಗ, ಮಂಗಳೂರು ಧಾರವಾಡ, ರಾಯಚೂರು

ರಾಯಚೂರು ವಲಯದ ತಂಡಗಳು: ಗುಲಬರ್ಗಾ ’ಎ‘ ತಂಡ: ಗುಲ್ಬರ್ಗ, ವಿಜಯಪುರ, ಬೀದರ, ಯಾದಗಿರಿ

ಗುಲಬರ್ಗಾ ‘ಬಿ’ ತಂಡ: ರಾಯಚೂರು, ಕೊಪ್ಪಳ, ಬಾಗಲಕೋಟೆ

ರಾಜ್ಯ ತಂಡಕ್ಕೆ ಆಯ್ಕೆ ಹೇಗೆ?

‘ವಲಯ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾದವರು, ವಲಯ ಮಟ್ಟದ ಪಂದ್ಯಗಳನ್ನು ಆಡಬೇಕು. ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದವರನ್ನು ಆಯಾ ವಲಯಗಳಿಗೆ ಆಯ್ಕೆ ಮಾಡಲಾಗುತ್ತದೆ. ಒಟ್ಟು 30 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ತಂಡದ ಆಯ್ಕೆ ಸದಸ್ಯ ವಿಜಯಪುರದ ಪ್ರಶಾಂತ ಹಜೆರೆ ತಿಳಿಸಿದರು.

‌‘ಆಯ್ಕೆಯಾದವರಿಗೆ 30 ದಿನಗಳ ವಿಶೇಷ ಶಿಬಿರ ಆಯೋಜಿಸಿ, ಅಂತಿಮವಾಗಿ 20 ಜನರ ರಾಜ್ಯ ತಂಡವನ್ನು ರಚಿಸಲಾಗುತ್ತದೆ. ಈ ಹಂತದಲ್ಲಿ ಗ್ರಾಮೀಣ, ಬೆಂಗಳೂರು ಮತ್ತು ರಣಜಿ ತಂಡಗಳ ನಡುವೆ ಪಂದ್ಯ ನಡೆಯುತ್ತವೆ. ಬಳಿಕ ರಾಜ್ಯ ತಂಡ ರಚನೆಯಾಗುತ್ತದೆ’ ಎಂದು ಅವರು ವಿವರಿಸಿದರು.

‘ರಾಜ್ಯ ತಂಡವು ಅಂತರರಾಜ್ಯ ಪಂದ್ಯಗಳನ್ನಾಡುತ್ತದೆ. ಈ ವೇಳೆ ಅವರಿಗೆ ಬಿಸಿಸಿಐನಿಂದ ದಿನಭತ್ಯೆ, ಊಟ ಮತ್ತು ಪ್ರಯಾಣ ವೆಚ್ಚ ಉಚಿತ ಇರುತ್ತದೆ. ಮುಂಬರುವ ದಿನಗಳಲ್ಲಿ ರಣಜಿ, ಭಾರತ, ಕಿರಿಯರ ತಂಡಕ್ಕೂ ಆಯ್ಕೆಯಾಗಬಹುದು’ ಎಂದು ಅವರು ಮಾಹಿತಿ ನೀಡಿದರು.

ರಾಯಚೂರು ವಲಯದಲ್ಲಿ ಉತ್ತಮ ಕ್ರಿಕೆಟ್‌ ಪಟುಗಳಿದ್ದಾರೆ. ಕೆಲವರು ಮಹಾರಾಜಾ ಕಪ್‌ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಕ್ರಿಕೆಟ್‌ನಲ್ಲಿಯೇ ಭವಿಷ್ಯ ರೂಪಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ವೇದಿಕೆ
ವಿಜಯಕುಮಾರ ಮಠಮಾರಿ, ಆಯ್ಕೆದಾರ

ವಲಯ ತಂಡಕ್ಕೆ ಆಯ್ಕೆ ಆಗುವುದೆಂದರೆ ಅದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ರಹದಾರಿ ಇದ್ದಂತೆ. ಅವಿರತ ಶ್ರಮ, ಪ್ರತಿಭೆಯಿದ್ದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬಹುದು
ರಾಜು ಕುಳಗೇರಿ, ಮುಖ್ಯಸ್ಥ, ರಾಯಚೂರು ವಲಯ

ಎರಡು ವರ್ಷಗಳಿಂದ ಕ್ಲಬ್‌ವೊಂದರಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದೇನೆ. ಮೊದಲ ಬಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ಒತ್ತಡದ ಮಧ್ಯೆಯೂ ಉತ್ತಮ ಬ್ಯಾಟಿಂಗ್‌ ಮಾಡಿರುವೆ
ಶ್ರೀನಿವಾಸ ಕೆವಲಗಿ, ಬ್ಯಾಟ್ಸ್‌ಮನ್‌ ಆಕಾಂಕ್ಷಿ

ನಾನು ಐದು ವರ್ಷಗಳಿಂದ ಕ್ರಿಕೆಟ್‌ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೇನೆ. ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದೇನೆ. ಈ ಬಾರಿ ಜಿಲ್ಲಾ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗುವ ಭರವಸೆಯಿದೆ
ಅಭಿಷೇಕ ಕಳಶೆಟ್ಟಿ, ಸ್ಪಿನ್‌ ಬೌಲಿಂಗ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT