ಸ್ಥಳೀಯ ಸಂಸ್ಥೆಗಳ ಚುನಾವಣೆ: ಮಹಿಳಾ ಮತದಾರರೇ ಹೆಚ್ಚು!

7
ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ; 29ರಂದು ಮತದಾನ

ಸ್ಥಳೀಯ ಸಂಸ್ಥೆಗಳ ಚುನಾವಣೆ: ಮಹಿಳಾ ಮತದಾರರೇ ಹೆಚ್ಚು!

Published:
Updated:

ಕಲಬುರ್ಗಿ: ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಚಲಾಯಿಸುವವರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪುರುಷರಿಗಿಂತ 1,931 ಹೆಚ್ಚು ಮಹಿಳಾ ಮತದಾರರು ಇದ್ದಾರೆ.

‘ಈ ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಮತಯಂತ್ರಗಳ ಪರಿಶೀಲನೆ ನಡೆದಿದ್ದು, ಸಿಬ್ಬಂದಿ ನೇಮಕ ಮತ್ತು ತರಬೇತಿ ಪೂರ್ಣಗೊಂಡಿದೆ. ನೋಟಾ ಮತ ಚಲಾವಣೆಗೂ ಅವಕಾಶ ಇದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಹಾಬಾದ್‌ ನಗರಸಭೆ, ಆಳಂದ, ಅಫಜಲಪುರ, ಜೇವರ್ಗಿ, ಸೇಡಂ, ಚಿತ್ತಾಪುರ, ಚಿಂಚೋಳಿ ಪುರಸಭೆಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 170 ಸ್ಥಾನಗಳಿವೆ. ಒಂದು ಸಂಸ್ಥೆಗೆ ಮೂವರು/ನಾಲ್ವರಂತೆ ಒಟ್ಟು 22 ಜನ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ವಿಧಾನಸಭೆ ಚುನಾವಣೆಯಂತೆ ಈ ಚುನಾವಣೆಯಲ್ಲಿಯೂ ಮತಯಂತ್ರಗಳಿಗೆ ಅಂಟಿಸುವ ಮತಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಲಾಗುವುದು. ನಗರಸಭೆಯ ಅಭ್ಯರ್ಥಿಗಳಿಗೆ ತಲಾ ₹2 ಲಕ್ಷ ಹಾಗೂ ಪುರಸಭೆಯ ಅಭ್ಯರ್ಥಿಗಳಿಗೆ ತಲಾ ₹1.5 ಲಕ್ಷ ವೆಚ್ಚದ ಮಿತಿ ವಿಧಿಸಲಾಗಿದೆ. ಪ್ರತ್ಯೇಕ ಖಾತೆ ತೆರೆದು ಅವರು ವೆಚ್ಚ ಮಾಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. 

ವೇಳಾಪಟ್ಟಿ

ಆಗಸ್ಟ್‌ 17 - ನಾಮಪತ್ರ ಸಲ್ಲಿಸಲು ಕೊನೆ ದಿನ

ಆಗಸ್ಟ್‌ 18  - ನಾಮಪತ್ರಗಳ ಪರಿಶೀಲನೆ

ಆಗಸ್ಟ್‌ 20  - ನಾಮಪತ್ರ ವಾಪಸ್‌ ಪಡೆಯಲು ಕೊನೆ ದಿನ

ಆಗಸ್ಟ್‌ 29 -  ಮತದಾನ

ಸೆಪ್ಟೆಂಬರ್‌ 3 -  ಮತ ಎಣಿಕೆ

7 ಸ್ಥಳೀಯ ಸಂಸ್ಥೆಗಳ ಮತದಾರರು

1,93,795 ಒಟ್ಟು ಮತದಾರರು

97,837 ಮಹಿಳಾ ಮತದಾರರು

95,906 ಪುರುಷ ಮತದಾರರು

52 ತೃತೀಯಲಿಂಗಿ ಮತದಾರರು

ಮತಗಟ್ಟೆಗಳು

218 ಒಟ್ಟು ಮತಗಟ್ಟೆಗಳು

103 ಸೂಕ್ಷ್ಮ ಮತಗಟ್ಟೆಗಳು

45 ಅತೀ ಸೂಕ್ಷ್ಮ ಮತಗಟ್ಟೆಗಳು

ಈಗ ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇಲ್ಲ. ಆದರೆ, ಲೋಕಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬಹುದು.
ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಚುನಾವಣಾಧಿಕಾರಿ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !