ವಡಗೇರಾ: ಜಾನುವಾರಿಗೆ ನೀರು ಕುಡಿಸಲು ಹೋಗಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಮತ್ತೊಬ್ಬ ಯುವಕ ಸಿದ್ದಪ್ಪ(21)ನ ಮೃತದೇಹವು ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ. ಭಾನುವಾರ ಪರಶುರಾಮ(ರಾಮ)(17)ನ ಮೃತದೇಹ ಪತ್ತೆಯಾಗಿತ್ತು.

ತಾಲ್ಲೂಕಿನ ಮಾಚನೂರು ಗ್ರಾಮದ ಪರಶುರಾಮ ಹಾಗೂ ಸಿದ್ದಪ್ಪ ಅವರು ಕಾಲು ಜಾರಿ ಭೀಮಾ ನದಿಯಲ್ಲಿ ಶುಕ್ರವಾರ ಬೆಳಿಗ್ಗೆ ಕೊಚ್ಚಿ ಹೋಗಿದ್ದರು.

ಅಂದಿನಿಂದ ಎಸ್ಡಿಆರ್ಎಫ್, ಅಗ್ನಿಶಾಮಕ ದಳ ಹಾಗೂ ಮೀನುಗಾರರ ತಂಡಗಳು ಯುವಕರ ಶೋಧಕಾರ್ಯ ನಡೆದಿತ್ತು. ಎರಡು ದಿನಗಳವರೆಗೆ ಯುವಕರ ದೇಹಗಳು ಪತ್ತೆಯಾಗಿರಲಿಲ್ಲ.

ಭಾನುವಾರ ಪರಶುರಾಮ(ರಾಮು) ಎಂಬ ಯುವಕನ ಮೃತದೇಹ ಘಟನೆ ನಡೆದ ಸ್ಥಳದಿಂದ ಸುಮಾರು 100 ಮೀಟರ್ ಅಂತರದಲ್ಲಿ ಪತ್ತೆಯಾಗಿತ್ತು. ಇನ್ನೊಬ್ಬ ಯುವಕನ ದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿತ್ತು. ಪಕ್ಕದ ಆಂದ್ರ ಪ್ರದೇಶದ ಕೃಷ್ಣಾ ನದಿಯಲ್ಲಿ ಶವ ತೇಲಿರುವುದು ಕಂಡ ಅಲ್ಲಿನ ಸಾರ್ವಜನಿಕರು, ಸೋಮವಾರ ಮಕ್ತಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಮೃತ ಸಿದ್ದಪ್ಪನ ದೇಹವನ್ನು ಗುರುತಿಸಿದ್ದಾರೆ. ಆಂಧ್ರ ಪೊಲೀಸರು ಮೃತ ದೇಹವನ್ನು ನಾರಾಯಣಪೇಟ್ ಜಿಲ್ಲೆಯ ಮಕ್ತಲ್ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಕುಟುಂಬಸ್ಥರು ಸೋಮವಾರ ಮಾಚನೂರ ಗ್ರಾಮಕ್ಕೆ ಶವ ತಂದು ಶವಸಂಸ್ಕಾರವನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕೈಗೆ ಬಂದ ಮಗ ನಮ್ಮ ಮುಪ್ಪಿನಾವಸ್ಥೆಯಲ್ಲಿ ದುಡಿದು ತಂದು ನಮ್ಮನ್ನು ಸಾಕುತ್ತಾನೆ ಎಂಬ ಕನಸು ಕಂಡಿದ್ದೆವು. ಆದರೆ ಈಗ ಮಗನಿಲ್ಲ. ಮುಂದೇನು ಎಂಬ ಚಿಂತೆ ಕಾಡುತ್ತಿದೆ
ಭೀಮಪ್ಪ ಮೃತ ಯುವಕ ಸಿದ್ದಪ್ಪನ ತಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.