ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಸಮಾಜಕ್ಕೆ ಅರುಣಕುಮಾರ ಅಧ್ಯಕ್ಷ

ಗೌರವಾಧ್ಯಕ್ಷರಾಗಿ ದೇಶಮುಖ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಘೂಳಿ ನೇಮಕ
Last Updated 18 ನವೆಂಬರ್ 2019, 15:52 IST
ಅಕ್ಷರ ಗಾತ್ರ

ಕಲಬುರ್ಗಿ:ಲಿಂಗಾಯತ–ವೀರಶೈವ ಸಮಾಜ ಸಂಘಟನೆಗಾಗಿ 1970ರ ದಶಕದಲ್ಲಿ ಅಸ್ತಿತ್ವಕ್ಕೆ ತರಲಾದ ಜಿಲ್ಲಾ ವೀರಶೈವ ಸಮಾಜದ ನೂತನ ಅಧ್ಯಕ್ಷರಾಗಿ ಅರುಣಕುಮಾರ ಪಾಟೀಲ ಅವರನ್ನು ಆಯ್ಕೆ ಮಾಡಿದ ಶರಣಬಸವೇಶ್ವರ ದಾಸೋಹ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು ಇತರ ಪದಾಧಿಕಾರಿಗಳ ಹೆಸರನ್ನೂ ಘೋಷಣೆ ಮಾಡುವ ಮೂಲಕ ಸಮಾಜದ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಶರಣರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಡಾ.ಅಪ್ಪ ಅವರು, ಸಮಾಜ ಸಂಘಟನೆ ಮತ್ತು ಅಭಿವೃದ್ಧಿ ಮಾಡುವ ಕೆಲಸಗಳನ್ನು ಹಿಂದೆಂದಿಗಿಂತಲೂ ಈಗ ಮಾಡುವುದು ಬಹುಮುಖ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹೊಣೆ ಅರಿತುಕೊಂಡು ಇಡೀ ಸಮಾಜಕ್ಕೆ ಗೌರವ ತರುವಂತಹ ಕೆಲಸಗಳನ್ನು ಮಾಡುವ ಮೂಲಕ ಮಾದರಿ ಸಂಘಟನೆಯಾಗಿಸಬೇಕು. ಸಮಾಜ ಮೊದಲಿನಿಂದಲೂ ಅನುಪಮ ಕೆಲಸಗಳನ್ನು ಮಾಡಿಕೊಂಡು ಬಂದಿದೆ, ಅವುಗಳನ್ನು ಮುಂದುವರೆಸುವಂತೆ ಅರುಣಕುಮಾರ ಪಾಟೀಲ್ ಕೊಡಲಹ ಹಂಗರಗಾ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಶ್ರೀಶೈಲ ಘೂಳಿ ಅವರಿಗೆ ಹೇಳಿದರು.

ಹೊಸ ಪದಾಧಿಕಾರಿಗಳು: ಬಸವರಾಜ ದೇಶಮುಖ (ಗೌರವಾಧ್ಯಕ್ಷ), ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ (ಅಧ್ಯಕ್ಷ), ಉಪಾಧ್ಯಕ್ಷರಾಗಿ ಕಲ್ಯಾಣಪ್ಪ ಪಾಟೀಲ ಮಳಖೇಡ, ಎಸ್.ವಿ. ಮಠಪತಿ, ನೀಲಕಂಠರಾವ ಮೂಲಗೆ, ಶಶಿಕಾಂತ ಪಾಟೀಲ ಚಿತ್ತಾಪುರ, ಎಂ.ಡಿ. ಪಾಟೀಲ, ಸುಭಾಷ ಬಿಜಾಪುರೆ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಶ್ರೀಶೈಲ ಘೂಳಿ, ಕಾರ್ಯದರ್ಶಿಗಳಾಗಿ ಸಿದ್ದರಾಮ ಪಾಟೀಲ ಬಿರಾದಾರ ದಣ್ಣೂರ, ರಾಜಕುಮಾರ ಕೋಟಿ, ಸುರೇಶ ಪಾಟೀಲ ಜೋಗೂರ ಮತ್ತು ಖಜಾಂಚಿಯಾಗಿ ಚಂದ್ರಶೇಖರ ತಳ್ಳಳ್ಳಿ ಕೆಲಸ ಮಾಡಲಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರು:ಮಾಜಿ ಮೇಯರ್ ಭೀಮರೆಡ್ಡಿ ಪಾಟೀಲ ಕುರಕುಂದಾ, ಉದ್ಯಮಿಗಳಾದ ಶರಣು ಪಪ್ಪಾ, ಸಂತೋಷ ಪಾಟೀಲ ಬಂಬಳಗಿ, ಮುಖಂಡರಾದ ನಾಗಣ್ಣ ಕಲಶೆಟ್ಟಿ, ಅಶೋಕ ಹೊನ್ನಳ್ಳಿ, ಶಿವಪುತ್ರಪ್ಪ ಡೆಂಕಿ, ಸಂಗಮೇಶ ನಾಗನಳ್ಳಿ, ರವಿ ಬಿರಾದಾರ, ಬಸವರಾಜ ಮಂಗಲಗಿ, ಶರಣು ಗೋಧಿ, ವಿಜಯಕುಮಾರ ಸಾತನೂರಕರ್, ಶರಣಗೌಡ ಸಂಕನೂರ, ಸುಭಾಷ ಮಂಗಾಣೆ, ರಮೇಶ ತಿಪ್ಪನೋರ, ರಾಜಶೇಖರ ಅಲ್ಲದ, ಚಂದ್ರಶೇಖರ ಕೋಬಾಳ, ಬಸವರಾಜ ಮಾಡಗಿ, ವಿವೇಕಾನಂದ ಬಿರಾದಾರ, ರಮೇಶ ಜೇವರ್ಗಿ, ಹರ್ಷವರ್ಧನ ಗುಗ್ಗಳೆ, ಸಂತೋಷ ಪಾಟೀಲ ಪೂರ್ವಿ, ಗುರುಬಸಪ್ಪ ಪಾಟೀಲ, ಸಚಿನ್ ನಿಗ್ಗುಡಗಿ, ಉದಯ ಪಾಟೀಲ, ಹಣಮಂತಪ್ಪ ಲೆಂಗಟಿ, ಅಂಬುತಾಯಿ ಗುಬ್ಯಾಡ್, ಆಶಾದೇವಿ ಖೂಬಾ, ಜಯಶ್ರೀ ಪಾಟೀಲ, ಅಂಬಿಕಾ ಮಾಲಿಪಾಟೀಲ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT