ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವಂತರು ಕಡ್ಡಾಯವಾಗಿ ರಕ್ತದಾನವನ್ನ ಮಾಡಬಹುದು: ವಿಜಯ ಮಹಾಂತೇಶ ಹೂಗಾರ

Published 17 ಡಿಸೆಂಬರ್ 2023, 14:10 IST
Last Updated 17 ಡಿಸೆಂಬರ್ 2023, 14:10 IST
ಅಕ್ಷರ ಗಾತ್ರ

ಅಫಜಲಪುರ: ‘ಗ್ರಾಹಕರ ಆರ್ಥಿಕ ವ್ಯವಹಾರಗಳನ್ನು ನಿಭಾಯಿಸುವ ಬ್ಯಾಂಕುಗಳು ರಕ್ತದಾನದಂತಹ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಾಮಾಜಿಕ ಸೇವೆಗೆ ಮುಂದಾಗಿರುವುದು ಸಂತಸ ತಂದಿದೆ. ಅಲ್ಲದೆ ಕಡ್ಡಾಯವಾಗಿ ಆರೋಗ್ಯವಂತರು ರಕ್ತದಾನ ಮಾಡಬಹುದು’ ಎಂದು ಪುರಸಭೆಯ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ ತಿಳಿಸಿದರು.

ಪಟ್ಟಣದ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ‘ರಕ್ತದಾನ, ಮಹಾದಾನ’ ಎಂಬ ಮಾತಿನಂತೆ ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವಕ್ಕೆ ಆಧಾರವಾಗುವ ರಕ್ತದಾನವು ಎಲ್ಲಾ ದಾನಗಳಲ್ಲಿ ಶ್ರೇಷ್ಠ ದಾನವಾಗಿದೆ. ಬ್ಯಾಂಕುಗಳು ಇಂತಹ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಸಾಮಾಜಿಕ ಕಳಕಳಿಗೆ ಮುಂದಾಗಿರುವುದು ಮಾದರಿ ಕೆಲಸವಾಗಿದೆ. ಇಂತಹ ಸಾಮಾಜಿಕ ಕೆಲಸಗಳು ನಿರಂತರವಾಗಿ ನಡೆಯಬೇಕು ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಐಸಿಪಿಸಿ ಆಪ್ತ ಸಮಾಲೋಚಕ ರವಿಕುಮಾರ ಬುರ್ಲಿ ಮಾತನಾಡಿ, ‘ಪ್ರತಿಯೊಬ್ಬ ಆರೋಗ್ಯವಂತರು ಕಡ್ಡಾಯವಾಗಿ ರಕ್ತದಾನ ಮಾಡಬೇಕು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ, ಶಿಬಿರಾರ್ಥಿಗಳಿಂದ ಪಡೆದ ರಕ್ತದ ಮಾದರಿಗಳನ್ನು ಕಲಬುರಗಿಯ ಸಾರ್ವಜನಿಕ ಆಸ್ಪತ್ರಗೆ ಕಳಿಸಿಕೊಡಲಾಗುವುದು. ಹಾಗೂ ಶಿಬಿರಾರ್ಥಿಗಳಿಗೆ ಅವರ ರಕ್ತದ ಗುಂಪು ತಿಳಿಸಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸುವುದಾಗಿ’ ತಿಳಿಸಿದರು.

ಪ್ರಾಸ್ತಾವಿಕವಾಗಿ ಶಾಖೆಯ ಸಹಾಯಕ ವ್ಯವಸ್ಥಾಪಕ ವೀರೇಶ ಹೂಗಾರ ಮಾತನಾಡಿ, ‘ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ದೇಶದಲ್ಲಿ ಸುಮಾರು 7900 ಶಾಖೆಗಳನ್ನು ಹೊಂದಿದೆ. ಬ್ಯಾಂಕಿನ ಸಹಯೋಗದಲ್ಲಿ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಕಳೆದ 15 ವರ್ಷಗಳಿಂದ ದೇಶದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಅಫಜಲಪುರದಲ್ಲಿ ಶಾಖೆಯು ಆರಂಭವಾದ ನಂತರ ಕಳೆದ 2 ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಆಶಾಕಿರಣ ಸೇವಾ ಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಮೇತ್ರಿ ಮಾತನಾಡಿದರು. ಈ ವೇಳೆ ಪ್ರಯೋಗ ಶಾಲಾ ತಂತ್ರಜ್ಞ ಗೌತಮ ಮೈಸಲಗಿ, ಮೇಘಾ, ಪ್ರತಿಭಾ ಮಹೀಂದ್ರಕರ ಸೇರಿದಂತೆ ಶಾಖೆಯ ಸಿಬ್ಬಂದಿ ದತ್ತು ಪಾಟೀಲ, ಗಂಗಾಧರಯ್ಯ ಹಿರೇಮಠ, ಉಲ್ಲಾಸ ಹಿರೇಮಠ, ಶಂಕ್ರೆಮ್ಮ, ದೀಪ್ತಿ ಪಾಟೀಲ, ಶಾಂತಕುಮಾರ, ರುದ್ರಗೌಡ, ವಿನೋದಕುಮಾರ, ಭೀಮಾಶಂಕರ ಉಪಸ್ಥಿತರಿದ್ದರು. ಒಟ್ಟು 13 ಜನ ಶಿಬಿರಾರ್ಥಿಗಳಿಂದ ಪಡೆದ ರಕ್ತವನ್ನು ಕಲಬುರ್ಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT