ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ

Published : 26 ಸೆಪ್ಟೆಂಬರ್ 2024, 16:00 IST
Last Updated : 26 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments

ಶಹಾಬಾದ್: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಕೇಂದ್ರ ಸಂಘದ ವತಿಯಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಮುಷ್ಕರದ ಅಂಗವಾಗಿ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಎದುರು ನೌಕರರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮುಷ್ಕರ ನಡೆಸಿದರು.

‘ನೌಕರರ ಮೂಲಭೂತ ಸೌಲಭ್ಯ ಮತ್ತು ಹಲವು ಸೇವಾ ಸೌಲಭ್ಯ ಹಾಗೂ ಮೊಬೈಲ್ ಆ್ಯಪ್ ಮೂಲಕ ಮಾನಸಿಕವಾಗಿ ಒತ್ತಡ ನೀಡುತ್ತಿರುವುದನ್ನು ನಿಲ್ಲಿಸಬೇಕು. ಹಾಗೂ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸದಿದ್ದರೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಮುಷ್ಕರ ಮುಂದುವರೆಯಲಿದೆ’ ಎಂದು ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮುಷ್ಕರದಲ್ಲಿ ಕಂದಾಯ ಅಧಿಕಾರಿ ಹಣಮಂತರಾಯ ಪಾಟೀಲ, ಶ್ರೀಮಂತ ರಾಮಕೋಟೆ, ಜಾನ್ ಜಾರ್ಜ್, ಶಿವಾನಂದ ಹೂಗಾರ, ಶರಣು ಕುಂಬಾರ, ಶಿಲ್ಪಾ.ವಿ, ಜಯಶ್ರೀ ಕೊಡೆಕಲ್‌, ಪಾರ್ವತಿ, ಇಮ್ರಾನ ತಾವರಗೇರಾ, ರೇವಣಸಿದ್ದಪ್ಪ ಪಾಟೀಲ, ಮರಲಿಂಗ ಗಂಗೂಬಾ, ಶಿವಲಿಂಗ, ಮಲ್ಲಿಕಾರ್ಜುನ, ಆನಂದ, ಶಿವಕಾಂತಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT