ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ | ಈಶಾನ್ಯ ಪದವೀಧರ ಕ್ಷೇತ್ರ: 4,010 ನೋಂದಣಿ

Published 10 ನವೆಂಬರ್ 2023, 5:23 IST
Last Updated 10 ನವೆಂಬರ್ 2023, 5:23 IST
ಅಕ್ಷರ ಗಾತ್ರ

ಸೇಡಂ: ಕರ್ನಾಟಕ ಈಶಾನ್ಯ ಪದವೀಧರರ ಮತದಾರ ಪಟ್ಟಿ ನೋಂದಣಿ ಕಾರ್ಯ ನವೆಂಬರ್ 6ಕ್ಕೆ ಮುಗಿದಿದ್ದು, ಸೇಡಂ ತಾಲ್ಲೂಕಿನಲ್ಲಿ ಸುಮಾರು 4,010 ಪದವೀಧರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಸೆಪ್ಟೆಂಬರ್ ತಿಂಗಳಿಂದ ನೋಂದಣಿ ಕಾರ್ಯ ಆರಂಭಗೊಂಡಿತ್ತು. ಕಳೆದ ಒಂದೂವರೆ ತಿಂಗಳಲ್ಲಿ ಸೇಡಂ ತಾಲ್ಲೂಕಿನಲ್ಲಿ ಮತದಾರರ ನೋಂದಣಿ ಅಭಿಯಾನವನ್ನು ತಹಶೀಲ್ದಾರ್ ಕಚೇರಿ ಆಯೋಜಿಸಿತ್ತು. ಅಲ್ಲದೆ ಕಾಲೇಜು-ವಕೀಲರ ಸಂಘ ಸೇರಿದಂತೆ ವಿವಿಧೆಡೆಗಳಲ್ಲಿ ಜಾಗೃತಿ ಅಭಿಯಾನ ಮಾಡಲಾಗಿತ್ತು. ಕಂದಾಯ ಇಲಾಖೆ, ಸಿಡಿಪಿಒ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಅಭಿಯಾನದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಿದೆ.

‘ಈ ಹಿಂದೆ ಸುಮಾರು 1,130 ಮಾತ್ರ ಪದವೀಧರರ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿತ್ತು. ಆದರೆ ಈ ಬಾರಿ ಪದವಿ ಪಡೆದ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ’ ಎಂದು ತಹಶೀಲ್ದಾರ್ ಕಚೇರಿಯ ಚುನಾವಣೆಯ ಶಾಖೆಯ ಮೂಲಗಳು ತಿಳಿಸಿವೆ.

ಪದವೀಧರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಲ್ಲಿ ಸೇಡಂ ತಾಲ್ಲೂಕು ಕಲಬುರಗಿ ಜಿಲ್ಲೆಗೆ ಮೂರನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನ ಕಲಬುರಗಿ ದಕ್ಷಿಣ 8,240, ದ್ವಿತೀಯ ಕಲಬುರಗಿ ಉತ್ತರ 6,248 ನೋಂದಣಿಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕರಡು ಮತದಾರರ ಪಟ್ಟಿ ನವೆಂಬರ್ 23 ರಂದು ಪ್ರಕಟಗೊಳ್ಳಲಿದ್ದು, ಆಕ್ಷೇಪಣೆಗೆ ಡಿಸೆಂಬರ್ 9ರವರೆಗೆ ಅವಕಾವಿದೆ. ಅಂತಿಮ ಮತದಾರರ ಪಟ್ಟಿ ಡಿಸೆಂಬರ್ 30ರಂದು ಪ್ರಕಟಕೊಳ್ಳಲಿದೆ.

ದಿನಾಂಕ ವಿಸ್ತರಣೆ ಇಲ್ಲ:
ತಹಶೀಲ್ದಾರ್ ಪದವೀಧರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ದಿನಾಂಕ ನವೆಂಬರ್ 16ವರೆಗೆ ವಿಸ್ತರಿಸಲಾಗಿದೆ ಎಂಬ ಮಾಹಿತಿ ವಾಟ್ಸ್ಆ್ಯಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ಕುರಿತು ‘ಪ್ರಜಾವಾಣಿ’ ತಹಶೀಲ್ದಾರ್ ಅವರಿಗೆ ಸ್ಪಷ್ಟನೆ ಕೇಳಿದಾಗ ‘ಸರ್ಕಾರದಿಂದ ದಿನಾಂಕದ ವಿಸ್ತರಣೆಯ ಕುರಿತು ಇಲ್ಲಿಯವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಸರ್ಕಾರದಿಂದ ಬಂದಲ್ಲಿ ಸಾರ್ವಜನಿಕರಿಗೆ ತಿಳಿಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಜನರು ನಂಬಬಾರದು. ಇಂತಹ ತಪ್ಪು ಸಂದೇಶಗಳನ್ನು ಜನರು ರವಾನಿಸಬಾರದು’ ಎಂದು ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT