ಬುಧವಾರ, ಏಪ್ರಿಲ್ 21, 2021
25 °C

ವಾಡಿ: ನದಿಗೆ ಹಾರಿದ್ದ ವೃದ್ಧೆಯ ರಕ್ಷಿಸಿದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ (ಕಲಬುರ್ಗಿ): ಕಾಗಿಣಾ ನದಿಯ ಶಂಕರವಾಡಿ ಸೇತುವೆ ಮೇಲೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯನ್ನು ಯುವಕನೊಬ್ಬ ತನ್ನ ಸಮಯ ಪ್ರಜ್ಞೆಯಿಂದ ಬುಧವಾರ ಕಾಪಾಡಿದ್ದಾನೆ.

ಕಾಗಿಣಾ ನದಿಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಇರುವ ಶಂಕರವಾಡಿ ಸೇತುವೆ ಮೇಲಿನಿಂದ ಬೀದರ್ ಮೂಲದ ವೃದ್ದೆ ಮಲ್ಲಮ್ಮ ನದಿಗೆ ಹಾರಿದ್ದಾರೆ. ನದಿಯಲ್ಲಿ ಮುಳುಗುತ್ತಿದ್ದಾಗ ವಾಹನ ಸವಾರರು ನೋಡಿ ಕೂಗಿದ್ದಾರೆ. ಅದೇ ಸಮಯದಲ್ಲಿ ಕಲಬುರ್ಗಿಯಿಂದ ವಾಡಿಗೆ ಬೈಕ್ ಮೇಲೆ ತೆರಳುತ್ತಿದ್ದ ಸಮೀರ್ ಹಾಗೂ ಮಹ್ಮದ್ ಮೊಹ್ಸಿನ್ ಪೈಕಿ ಸಮೀರ್ ಎಂಬ ಯುವಕ ಸೇತುವೆ ಮೇಲಿನಿಂದ ನದಿಗೆ ಹಾರಿ ಮುಳುಗುತ್ತಿದ್ದ ವೃದ್ದೆಯ ರಕ್ಷಣೆ ಮಾಡಿದ್ದಾರೆ. 

ನಂತರ ಸ್ಥಳಕ್ಕೆ ಬಂದ ಗಸ್ತು ಪೊಲೀಸರು ಅಂಬುಲೆನ್ಸ್ ಮೂಲಕ ಮಹಿಳೆಯನ್ನು ಶಹಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹರಿಯುವ ನದಿಯಲ್ಲಿ ಪ್ರಾಣ ಲೆಕ್ಕಿಸದೇ ವೃದ್ದೆಯ ರಕ್ಷಿಸಿದ ಸಮೀರ್ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೃದ್ದೆಯ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು