ಸೋಮವಾರ, ಸೆಪ್ಟೆಂಬರ್ 20, 2021
21 °C

ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡ್ರಾಮಿ: ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮುರುಘೇಂದ್ರ ಶಿವಯೋಗಿ ಮಠದ ಪೀಠಾಧಿಪತಿ ಸಿದ್ದರಾಮ ಸ್ವಾಮೀಜಿ (78) ಸೋಮವಾರ ನಿಧನರಾದರು.  ಪಟ್ಟಣದ ಮಠದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ 1942ರ ಜೂನ್ 2ರಂದು ಜನಿಸಿದ ಅವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ನಂತರದ ಶಿಕ್ಷಣವನ್ನು ಯಡ್ರಾಮಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಪಡೆದರು. ಶಿಕ್ಷಣದ ವೇಳೆ ಧಾರವಾಡದ ಮುರುಘಾಮಠದಲ್ಲೂ ಅವರು ತಂಗಿದರು. 

ಯಡ್ರಾಮಿಯಲ್ಲಿ ಮಠದ ಪೀಠಾಧಿಪತಿಯಾದ ದಿನದಿಂದ ಸಿದ್ದರಾಮ ಸ್ವಾಮೀಜಿ ಅವರು ಭಕ್ತರು ಸೇರಿದಂತೆ ಎಲ್ಲರ ಏಳ್ಗೆಗೆ  ಶ್ರಮಿಸಿದರು. ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ನೆರವಾದರು. ಶಾಂತಿ, ಸೌಹಾರ್ದ ಬದುಕಿಗೆ ಅವರು ಮಾರ್ಗದರ್ಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು